ವಿದೇಶ

ಬ್ರಿಟನ್ ನಿಂದ ಐತಿಹಾಸಿಕ ನಿರ್ಧಾರ: ಐರೋಪ್ಯ ಒಕ್ಕೂಟದಿಂದ ಅಧಿಕೃತವಾಗಿ ಹೊರಬಂದ ಬ್ರಿಟನ್  

ಐರೋಪ್ಯ ಒಕ್ಕೂಟದ ಸುಮಾರು ಅರ್ಧ ದಶಕಗಳ ಸದಸ್ಯತ್ವದಿಂದ ಬ್ರಿಟನ್ ಹೊರಬಂದಿದೆ. ತನ್ನ ಅನಿಶ್ಚಿತತೆಯ ಹಾದಿ ಮಧ್ಯೆ ಕಹಿ ವಾದ ವಿವಾದಗಳನ್ನು ಮಾಡಿಕೊಂಡಿದ್ದ ಬ್ರಿಟನ್ ಕೊನೆಗೂ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ.

ಬ್ರಿಟನ್ ನಿಂದ ಐತಿಹಾಸಿಕ ನಿರ್ಧಾರ: ಐರೋಪ್ಯ ಒಕ್ಕೂಟದಿಂದ ಅಧಿಕೃತವಾಗಿ ಹೊರಬಂದ ಬ್ರಿಟನ್  
ಬ್ರೆಕ್ಸಿಟ್ ಬೆಂಬಲಿಗರ ಸಂಭ್ರಮಾಚರಣೆ
Published On :

ಲಂಡನ್: ಐರೋಪ್ಯ ಒಕ್ಕೂಟದ ಸುಮಾರು ಅರ್ಧ ದಶಕಗಳ ಸದಸ್ಯತ್ವದಿಂದ ಬ್ರಿಟನ್ ಹೊರಬಂದಿದೆ. ತನ್ನ ಅನಿಶ್ಚಿತತೆಯ ಹಾದಿ ಮಧ್ಯೆ ಕಹಿ ವಾದ ವಿವಾದಗಳನ್ನು ಮಾಡಿಕೊಂಡಿದ್ದ ಬ್ರಿಟನ್ ಕೊನೆಗೂ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ.


ಬ್ರಿಟನ್ ನ ಈ ನಿರ್ಧಾರಕ್ಕೆ ದೇಶದ ನಾಗರಿಕರಲ್ಲಿ ಸಂಭ್ರಮ ಮತ್ತು ಕಣ್ಣೀರು ಕಂಡುಬಂತು. ಎರಡನೇ ವಿಶ್ವಯುದ್ಧ ನಂತರ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ಮಧ್ಯೆ ಒಗ್ಗಟ್ಟು ಪ್ರದರ್ಶಿಸಲು ರಚನೆಯಾಗಿದ್ದ ಐರೋಪ್ಯ ಒಕ್ಕೂಟದಿಂದ ಹೊರಬರಲು ಬ್ರಿಟನ್ ಪ್ರಯತ್ನಿಸುತ್ತಲೇ ಬಂದಿತ್ತು. 


ಈ ಮೂಲಕ ಬ್ರಿಟನ್ ಐರೋಪ್ಯ ಒಕ್ಕೂಟದ 47 ವರ್ಷಗಳ ಸದಸ್ಯತ್ವವನ್ನು ಕೊನೆಗೊಳಿಸಿದೆ. ಬ್ರಿಟನ್ ನನ ಒಟ್ಟು ಪ್ರಜೆಗಳ ಅರ್ಧಕ್ಕೂ ಹೆಚ್ಚು ಸದಸ್ಯರು ಮೂರೂವರೆ ವರ್ಷಗಳ ಹಿಂದೆ ಬ್ರೆಕ್ಸಿಟ್ ಪರವಾಗಿ ಮತ ಚಲಾಯಿಸಿದ್ದರು.

ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ಪ್ರಕ್ರಿಯೆಯಾದ ಬ್ರೆಕ್ಸಿಟ್ ಗೆ ಐರೋಪ್ಯ ಸಂಸತ್ ಅಂತಿಮ ಒಪ್ಪಿಗೆ ನೀಡುವ ಮೂಲಕ ಐದು ದಶಕದ ಐರೋಪ್ಯ ಒಕ್ಕೂಟದ ಒಡನಾಟವನ್ನು ಬ್ರಿಟನ್ ಶುಕ್ರವಾರ ಅಧಿಕೃತವಾಗಿ ಕಡಿದುಕೊಂಡಿದೆ. ಇದರಿಂದ 28 ದೇಶಗಳ ಪ್ರಬಲ ಒಕ್ಕೂಟದಿಂದ ಬ್ರಿಟನ್ ದೂರವಾಗಲಿದ್ದು, ಒಕ್ಕೂಟಕ್ಕೆ ದೊಡ್ಡ ಹಿನ್ನಡೆ ಆಗಲಿದೆ.

ಬ್ರೆಕ್ಸಿಟ್ ನಿಲುವಳಿ ಮೇಲೆ ಬುಧವಾರ ನಡೆದ ಚರ್ಚೆಯಲ್ಲಿ ಐರೋಪ್ಯ ಸಂಸತ್​ನ ಅನೇಕ ಸದಸ್ಯರು ಭಾವನಾತ್ಮಕ ಭಾಷಣ ಮಾಡಿದ್ದರು. ಕೊನೆಯಲ್ಲಿ ನಡೆದ ಮತದಾನದಲ್ಲಿ ಬ್ರಿಕ್ಸಿಟ್ ಪರ 621 ಮತ್ತು ವಿರುದ್ಧ 49 ಮತ ಚಲಾವಣೆಯಾದವು. 13 ಸದಸ್ಯರು ತಟಸ್ಥರಾದರು. ಸ್ಕಾಟ್ಲೆಂಡ್​ನ ಸಾಂಪ್ರದಾಯಿಕ ವಿದಾಯ ಗೀತೆ ‘ಆಲ್ಡ್ ಲ್ಯಾಂಗ್ ಸೈನ್’ ಅನ್ನು ನುಡಿಸುವ ಮೂಲಕ ಬ್ರಿಟನ್​ಗೆ ಬೀಳ್ಕೊಡುಗೆ ನೀಡಲಾಯಿತು. ಐರೋಪ್ಯ ಸಂಸತ್​ನಲ್ಲಿ ಅಯು ರಿವೊಯಿಲ್ ಪಕ್ಷದ ನೇತೃತ್ವದಲ್ಲಿ ಬ್ರಿಟನ್​ನ 73 ಸಂಸದರು ಇದ್ದು, ಹಲವರು ಬೇಸರದಿಂದ ಕಣ್ಣೀರು ಹಾಕಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.