ವಿದೇಶ

ಟಿಕ್ ಟಾಕ್ ನಿಷೇಧ? ಅಮೆರಿಕಾ 'ಬೆದರಿಸುತ್ತಿದೆ' ಎಂದು ಚೀನಾ ಆರೋಪ!

ಸೆಪ್ಟೆಂಬರ್ 15ರೊಳಗಾಗಿ ಮಾರಾಟವಾಗದೇ ಹೋದಲ್ಲಿ, ಅಮೆರಿಕಾದಲ್ಲಿ ಟಿಕ್ ಟಾಕ್ ಆ್ಯಪ್'ನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದಕ್ಕೆ ಚೀನಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಟಿಕ್ ಟಾಕ್ ನಿಷೇಧ? ಅಮೆರಿಕಾ 'ಬೆದರಿಸುತ್ತಿದೆ' ಎಂದು ಚೀನಾ ಆರೋಪ!
ಟ್ರಂಪ್-ಜಿನ್ ಪಿಂಗ್
Published On :

ವಾಷಿಂಗ್ಟನ್: ಸೆಪ್ಟೆಂಬರ್ 15ರೊಳಗಾಗಿ ಮಾರಾಟವಾಗದೇ ಹೋದಲ್ಲಿ, ಅಮೆರಿಕಾದಲ್ಲಿ ಟಿಕ್ ಟಾಕ್ ಆ್ಯಪ್'ನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದಕ್ಕೆ ಚೀನಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 

ನಾನು ಈಗಾಗಲೇ ಟಿಕ್ ಟಾಕ್ ಆ್ಯಪ್'ಗೆ ಸೆಪ್ಟೆಂಬರ್ 15ರವರೆಗೂ ಗಡುವು ನೀಡಿದ್ದೇನೆ. ಗಡುವಿನೊಳಗೆ ಟಿಕ್ ಟಾಕ್ ಆ್ಯಪ್ ಮಾರಾಟವಾಗದೇ ಹೋದಲ್ಲಿ, ಆ್ಯಪ್'ನ್ನು ಸಂಪೂರ್ಣವಾಗಿ ಸ್ಥಗಿತಗೊಳಸಲಾಗುತ್ತದೆ. ಆ್ಯಪ್'ನ್ನು ಮೈಕ್ರೋಸಾಫ್ಟ್ ಅಥವಾ ಇತರೆ ಯಾವುದೇ ಸಂಸ್ಥೆ ಖರೀದಿ ಮಾಡಬಹುದು ಎಂದು ಹೇಳಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಈ ಮೂಲಕ ಅಮೆರಿಕಾ ಹೆದರಿಸುತ್ತಿದೆ ಎಂದು ಹೇಳಿದೆ. 

ಇದು ಮಾರುಕಟ್ಟೆ ಆರ್ಥಿಕತೆಯ ತತ್ವಗಳ(ವಿಶ್ವ ವಾಣಿಜ್ಯ ಸಂಸ್ಥೆಯ) ಮುಕ್ತತೆ, ಪಾರದರ್ಶಕತೆ ಮತ್ತು ತಾರತಮ್ಯರಹಿತ ತತ್ವಗಳಿಗೆ ವಿರುದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ.

ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ದಿನದಿಂದ ದಿನಕ್ಕೆ ವಿಶ್ವದ ಒಂದೊಂದೇ ದೇಶಗಳು ಟಿಕ್ ಟಾಕ್ ಆ್ಯಪ್ ಗಳನ್ನು ನಿಷೇಧಿಸುತ್ತಿವೆ. ಅದರಲ್ಲೂ ಭಾರತ, ಅಮೆರಿಕಾ ಸೇರಿದಂತೆ ಪ್ರಮುಖ ದೇಶಗಳು ಟಿಕ್ ಟಾಕ್ ನಿಷೇಧಿಸುತ್ತಿರುವುದರಿಂದ ಚೀನಾ ರಾಷ್ಟ್ರಕ್ಕೆ ಭಾರೀ ಹೊಡೆತ ಬಿದ್ದಂತಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.