ವಿದೇಶ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್- ಸಂಗಾತಿ ಕ್ಯಾರಿ ಸೈಮಂಡ್ಸ್ ಗೆ ಗಂಡು ಮಗು ಜನನ 

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಅವರ ಪತ್ನಿ ಕ್ಯಾರಿ ಸೈಮಂಡ್ಸ್ ಗೆ ಗಂಡು ಮಗು ಜನಿಸಿದೆ.

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್- ಸಂಗಾತಿ ಕ್ಯಾರಿ ಸೈಮಂಡ್ಸ್ ಗೆ ಗಂಡು ಮಗು ಜನನ 
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್- ಕ್ಯಾರಿ ಸೈಮಂಡ್ಸ್
Published On :

ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಪತ್ನಿ ಕ್ಯಾರಿ ಸೈಮಂಡ್ಸ್ ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ 

ಈ ಬಗ್ಗೆ ಬೋರಿಸ್ ಜಾನ್ಸನ್ ಅವರ ಕಚೇರಿ ಮಾಹಿತಿ ನೀಡಿದ್ದು, ಜಾನ್ಸನ್ ಅವರ ಪತ್ನಿ ಲಂಡನ್ ನ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ಆರೋಗ್ಯಕರ ಗಂಡುಮಗುವಿಗೆ ಜನ್ಮ ನೀಡಿದ್ದಾರೆ, ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಹೇಳಿದೆ.

ಕೊರೋನಾ ವೈರಸ್ ಸೋಂಕಿಗೆ ಗುರಿಯಾಗಿದ್ದ ಜಾನ್ಸನ್ ಆರೋಗ್ಯ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಏ.27 ರಿಂದ ಕಚೇರಿಗೆ ಆಗಮಿಸಲು ಪ್ರಾರಂಭಿಸಿದ್ದರು. 

ಪ್ರಧಾನಿ ಬೋರಿಸ್ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದರು. ಇತ್ತ ಬೋರ್ಸ್ ಪತ್ನಿ ತಾವೂ ಸಹ ಕೊರೋನಾ ಲಕ್ಷಣಗಳಿಂದ ಒಂದು ವಾರಗಳ ಕಾಲ ಅನಾರೋಗ್ಯ ಪೀಡಿತರಾಗಿದ್ದಾಗಿ ಹೇಳಿದ್ದಾರೆ. 

ಜಾನ್ಸನ್ ಗೆ ಎರಡನೇ ಪತ್ನಿ ಮರೀನಾ ವೀಲರ್ ಅವರಲ್ಲಿ ನಾಲ್ವರು ಮಕ್ಕಳಿದ್ದಾರೆ. ಎರಡನೇ ಪತ್ನಿಯಿಂದ ಜಾನ್ಸನ್ ವಿಚ್ಛೇದನ ಪಡೆದಿದ್ದಾರೆ. ವಿವಾಹೇತರ ಸಂಬಂಧದಲ್ಲಿ ಜಾನ್ಸನ್ ಗೆ ಮತ್ತೊಂದು ಮಗು ಸಹ ಇದೆ. 

ಬ್ರಿಟನ್ ನ ಮಾಜಿ ಪ್ರಧಾನಿಗಳಾದ ಡೇವಿಡ್ ಕ್ಯಾಮರೂನ್, ಟೋನಿ ಬ್ಲೇರ್ ಅವರು ಅಧಿಕಾರದಲ್ಲಿದ್ದಾಗ ಮಕ್ಕಳನ್ನು ಪಡೆದಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.