ಪ್ರತಿಕಾಯಗಳು ಕೊರೋನಾ ಎರಡನೇ ಸುತ್ತಿನ ಹರಡುವಿಕೆ ತಡೆಗಟ್ಟುತ್ತವೆ ಎಂಬ ಖಾತರಿ ಇಲ್ಲ: ವಿಶ್ವ ಆರೋಗ್ಯ ಸಂಸ್ಥೆ
ಕೋವಿಡ್-19 ರೋಗದ ಸ್ವರೂಪ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿದೆ. ಇತ್ತ ಮದ್ದನ್ನೂ ಕಂಡು ಹಿಡಿಯಲು ಸಾಧ್ಯವಾಗದೇ ಅತ್ತ ಹರಡುವಿಕೆಯನ್ನೂ ತಡೆಯಲಾಗದ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದೆ ಜಾಗತಿಕ ಸಮುದಾಯ.

ನ್ಯೂಯಾರ್ಕ್: ಕೋವಿಡ್-19 ರೋಗದ ಸ್ವರೂಪ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿದೆ. ಇತ್ತ ಮದ್ದನ್ನೂ ಕಂಡು ಹಿಡಿಯಲು ಸಾಧ್ಯವಾಗದೇ ಅತ್ತ ಹರಡುವಿಕೆಯನ್ನೂ ತಡೆಯಲಾಗದ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದೆ ಜಾಗತಿಕ ಸಮುದಾಯ.
ಈ ಪರಿಸ್ಥಿತಿಯ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಮತ್ತಷ್ಟು ಎಚ್ಚರಿಕೆ ನೀಡಿದ್ದು, ಒಮ್ಮೆ ಕೋವಿಡ್ ನಿಂದ ಗುಣಮುಖವಾಗಿ ವೈರಸ್ ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳನ್ನು ಗಳಿಸಿಕೊಂಡ ವ್ಯಕ್ತಿ ಎರಡನೇ ಸುತ್ತಿನ ಹರಡುವಿಕೆಯಿಂದ ಪಾರಾಗಬಹುದೆಂಬ ಖಾತರಿ ಇಲ್ಲ ಎಂದು ಹೇಳಿದೆ.
ಕೋವಿಡ್ ನಿಂದ ಗುಣಮುಖರಾದವರಲ್ಲಿ ವೈರಾಣು ವಿರುದ್ಧ ಹೋರಾಟ ಮಾಡುವ ಪ್ರತಿಕಾಯಗಳಿರುತ್ತವೆ ಎಂಬುದು ಹಲವಾರು ಸಂಶೋಧನೆಗಳ ಮೂಲಕ ಸಾಬೀತಾಗಿದೆ. ಆದರೆ ಈ ಪೈಕಿ ಹಲವರಿಗೆ ಪ್ರತಿಕಾಯಗಳನ್ನು ರಕ್ತದಲ್ಲಿ ಸಮತೋಲನಗೊಳಿಸುವ ಮಟ್ಟ ಕಡಿಮೆ ಇರುತ್ತದೆ. ಹೀಗಾಗಿ ಪ್ರತಿಕಾಯಗಳು ಎರಡನೇ ಸುತ್ತಿನ ಹರಡುವಿಕೆ ತಡೆಗಟ್ಟುತ್ತವೆ ಎಂಬುದಕ್ಕೆ ಖಾತರಿ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


