ವಿದೇಶ

ಕೊರೋನಾ ಹೋರಾಟಕ್ಕೆ ಸಾಥ್ ನೀಡಿದ ಸ್ವಿಜರ್ಲೆಂಡ್: ಸ್ವಿಸ್ ಪರ್ವತದ ಮೇಲೆ ಭಾರತದ ತ್ರಿವರ್ಣಧ್ವಜ ಪ್ರತಿಫಲನ

ಸ್ವಿಜರ್ಲೆಂಡ್'ನ ಹೆಗ್ಗುರುತುಗಳಲ್ಲಿ ಒಂದಾಗಿರುವ ಮ್ಯಾಟರ್ ಹಾರ್ನ್ ಪರ್ವತಗಳ ಮೇಲೆ ಶುಕ್ರವಾರ ರಾತ್ರಿ ಭಾರತದ ರಾಷ್ಟ್ರಧ್ವಜವಾದ ತ್ರಿವರ್ಣಧ್ವಜದ ಛಾಯಾವರ್ಣವನ್ನು ಬಿಡಲಾಗಿದ್ದು, ಈ ಮೂಲಕ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಭಾರತದೊಂದಿಗೆ ಕೈಜೋಡಿಸಿದೆ.

ಕೊರೋನಾ ಹೋರಾಟಕ್ಕೆ ಸಾಥ್ ನೀಡಿದ ಸ್ವಿಜರ್ಲೆಂಡ್: ಸ್ವಿಸ್ ಪರ್ವತದ ಮೇಲೆ ಭಾರತದ ತ್ರಿವರ್ಣಧ್ವಜ ಪ್ರತಿಫಲನ
ಕೊರೋನಾ ಹೋರಾಟಕ್ಕೆ ಸಾಥ್ ನೀಡಿದ ಸ್ವಿಜರ್ಲೆಂಡ್: ಸ್ವಿಸ್ ಪರ್ವತದ ಮೇಲೆ ಭಾರತದ ತ್ರಿವರ್ಣಧ್ವಜ ಪ್ರತಿಫಲನ
Published On :

ಜಿನೇವಾ: ಸ್ವಿಜರ್ಲೆಂಡ್'ನ ಹೆಗ್ಗುರುತುಗಳಲ್ಲಿ ಒಂದಾಗಿರುವ ಮ್ಯಾಟರ್ ಹಾರ್ನ್ ಪರ್ವತಗಳ ಮೇಲೆ ಶುಕ್ರವಾರ ರಾತ್ರಿ ಭಾರತದ ರಾಷ್ಟ್ರಧ್ವಜವಾದ ತ್ರಿವರ್ಣಧ್ವಜದ ಛಾಯಾವರ್ಣವನ್ನು ಬಿಡಲಾಗಿದ್ದು, ಈ ಮೂಲಕ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಭಾರತದೊಂದಿಗೆ ಕೈಜೋಡಿಸಿದೆ. 

ಸ್ವಿಜರ್ಲೆಂಡ್ ಖ್ಯಾತ ಬೆಳಕಿನ ಕಲಾವಿದ ಗ್ರೇ ಹಾಫ್ ಸೆಟ್ಟರ್ ಅವರು 14,690 ಅಡಿ ಎತ್ತರದ ಪರ್ವತವನ್ನು ತ್ರಿವರ್ಣಧ್ವಜದಿಂದ ಕಂಗೊಳಿಸುವಂತೆ ಮಾಡಿದ್ದಾರೆ. 

4 ಕಿ.ಮೀ ದೂರದಿಂಲೇ ಸೆಟ್ಟರ್ ಅವರು, ಲೈಟ್ ಪ್ರೊಜೆಕ್ಷನ್ ಇರಿಸಿ, ಪರ್ವತದ ಮೇಲೆ ಚಿತ್ತಾರ ಮೂಡಿಸಿ, ಇದು ಭರವಸೆಯ ಬೆಳಕು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. 

ಭಾರತದ ರಾಜತಾಂತ್ರಿಕ ಅಧಿಕಾರಿಣಿ ಗುರ್ಲೀನ್ ಕೌರ್ ಅವರು, ಈ ಛಾಯಾಚಿತ್ರಗಳನ್ನು ಟ್ವೀಟ್ ಮಾಡಿದ್ದು, ಹಿಮಾಲಯದಿಂದ ಸ್ವಿಜರ್ಲೆಂಡ್'ನ ಆಲ್ಪ್ ಪರ್ವತದವರೆಗೆ ಸ್ನೇಹ ವಿಸ್ತರಿಸಿದೆ. ಧನ್ಯವಾದ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. 

ಬುಧವಾರ ರಾತ್ರಿ ಕೂಡ ಸ್ವಿಸ್, ಅಮೆರಿಕಾ, ಬ್ರಿಟನ್, ಇಟಲಿಗಳ ರಾಷ್ಟ್ರಧ್ವಜಗಳು ಪರ್ವತದ ಮೇಲೆ ಪ್ರತಿಫಲಿಸುವಂತೆ ಮಾಡಲಾಗಿತ್ತು. 

ಹಾರ್ನ್ ಪರ್ವತಗಳ ಮೇಲೆ ಭಾರತದ ರಾಷ್ಟ್ರಧ್ವಜ ಪ್ರತಿಫಲಿಸಿರುವ ಈ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ವೈರಲ್ ಆಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.