ವಿದೇಶ

ಕೋವಿಡ್-19 ಲಾಕ್ ಡೌನ್: ಫ್ರಾನ್ಸಿಸ್ ಪೋಪ್ ರಿಂದ ಈಸ್ಟರ್ ಸಂಡೆ ನೇರ ಪ್ರಸಾರ

ಲಾಕ್ ಡೌನ್ ಕಾರಣದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪೋಪ್ ಫ್ರಾನ್ಸಿಸ್ ಶತಮಾನಗಳ ಸಂಪ್ರದಾಯಗಳನ್ನು ಮುರಿದು ಈಸ್ಟರ್ ಸಂಡೆ ಕಾರ್ಯಕ್ರಮವನ್ನು ನೇರ ಪ್ರಸಾರ ಮೂಲಕ ಕ್ರೈಸ್ತ ಧರ್ಮೀಯರಿಗೆ ಪ್ರವಚನ ಮಾಡಲಿದ್ದಾರೆ.

ಕೋವಿಡ್-19 ಲಾಕ್ ಡೌನ್: ಫ್ರಾನ್ಸಿಸ್ ಪೋಪ್ ರಿಂದ ಈಸ್ಟರ್ ಸಂಡೆ ನೇರ ಪ್ರಸಾರ
Published On :

ವಾಟಿಗನ್ ಸಿಟಿ: ಲಾಕ್ ಡೌನ್ ಕಾರಣದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪೋಪ್ ಫ್ರಾನ್ಸಿಸ್ ಶತಮಾನಗಳ ಸಂಪ್ರದಾಯಗಳನ್ನು ಮುರಿದು ಈಸ್ಟರ್ ಸಂಡೆ ಕಾರ್ಯಕ್ರಮವನ್ನು ನೇರ ಪ್ರಸಾರ ಮೂಲಕ ಕ್ರೈಸ್ತ ಧರ್ಮೀಯರಿಗೆ ಪ್ರವಚನ ಮಾಡಲಿದ್ದಾರೆ.

ಗುಡ್ ಫ್ರೈಡೆ ಮುಗಿದ ನಂತರ ಇಂದು ಈಸ್ಟರ್ ಸಂಡೆ ಕ್ಯಾಥೊಲಿಕ್ ಕ್ರೈಸ್ತ ಧರ್ಮೀಯರಿಗೆ ಅತ್ಯಂತ ಪವಿತ್ರ ದಿನ. ವ್ಯಾಟಿಕನ್ ಸಿಟಿಯಲ್ಲಿ ಲಕ್ಷಾಂತರ ಮಂದಿ ಸೇರಿ ಆಚರಿಸುತ್ತಿದ್ದರು. ಆದರೆ ಈ ವರ್ಷ ಕೊರೋನಾ ವೈರಸ್ ನಿಂದಾಗಿ ಸಾಮೂಹಿಕವಾಗಿ ಸೇರಿ ಆಚರಿಸಲು ಸಾಧ್ಯವಾಗುತ್ತಿಲ್ಲ.

ಪೋಪ್ ಫ್ರಾನ್ಸಿಸ್ ಇಂದು ತಮ್ಮ ಖಾಸಗಿ ಗ್ರಂಥಾಲಯದಿಂದ ಧರ್ಮ ಬೋಧನೆ ಮಾಡಲಿದ್ದು ಅಲ್ಲಿಂದ ಇಡೀ ವಿಶ್ವದ ಕ್ರೈಸ್ತ ಧರ್ಮೀಯರಿಗೆ ನೋಡಲು, ಕೇಳಲು ಅವಕಾಶ ಕಲ್ಪಸಲು ನೇರ ಪ್ರಸಾರ ಮಾಡಲಾಗುತ್ತಿದೆ. ಕೊರೋನಾ ಸೋಂಕಿನಿಂದ ಹೊರಹೋಗಲು ಸಾಧ್ಯವಾಗದೆ 83 ವರ್ಷದ ಪೋಪ್ ಅವರಿಗೆ ಪಂಜರದೊಳಗೆ ಇದ್ದಂತಹ ಅನುಭವವಾಗುತ್ತಿದೆಯಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.