ವಿದೇಶ

ಕೊರೋನಾಗೆ ಅಮೆರಿಕಾ ಕಂಗಾಲು: ಒಂದೇ ದಿನ 2,508 ಸೋಂಕಿತರು ಸಾವು, 5 ಲಕ್ಷ ದಾಟಿದ ಪ್ರಕರಣಗಳು

ಅಮೆರಿಕದಲ್ಲಿ ಕೊರೊನವೈರಸ್‍ ಕೇಕೆ ಮುಂದುವರೆದಿದ್ದು, ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 5,00,000 ದಾಟಿದ್ದು, ಸಾವಿನ ಸಂಖ್ಯೆ 18,777 ಕ್ಕೆ ಏರಿದೆ.

ಕೊರೋನಾಗೆ ಅಮೆರಿಕಾ ಕಂಗಾಲು: ಒಂದೇ ದಿನ 2,508 ಸೋಂಕಿತರು ಸಾವು, 5 ಲಕ್ಷ ದಾಟಿದ ಪ್ರಕರಣಗಳು
ಸಂಗ್ರಹ ಚಿತ್ರ
Published On :

ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನವೈರಸ್‍ ಕೇಕೆ ಮುಂದುವರೆದಿದ್ದು, ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 5,00,000 ದಾಟಿದ್ದು, ಸಾವಿನ ಸಂಖ್ಯೆ 18,777 ಕ್ಕೆ ಏರಿದೆ.

ಕಳೆದ 24 ಗಂಟೆಗಳಲ್ಲಿ 2,508 ಸಾವುಗಳು ಸಂಭವಿಸುವುದರೊಂದಿಗೆ ಒಂದೇ ದಿನದಲ್ಲಿ ಅತಿ ಹೆಚ್ಚು ಸಾವು ಪ್ರಮಾಣ ಇದಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ಹೇಳಿದೆ.

ಭಾರತೀಯ ಕಾಲಮಾನ ಶನಿವಾರ ಬೆಳಿಗ್ಗೆ 11.30ರವರೆಗೆ ಅಮೆರಿಕದಲ್ಲಿ ಒಟ್ಟು ಸೋಂಕುಗಳ ಸಂಖ್ಯೆ 5,01,560 ರಷ್ಟಿದೆ.
ಒಂದೇ ದಿನದಲ್ಲಿ 2,000 ಕ್ಕೂ ಹೆಚ್ಚು ಕರೋನಾ ಸಂಬಂಧಿತ ಸಾವು ಸಂಭವಿಸಿದ ಮೊದಲ ದೇಶವಾಗಿರುವ ಅಮೆರಿಕ, 18,849 ಸಾವು ಸಂಭವಿಸಿರುವ ಇಟಲಿಯ ನಂತರದ ಸ್ಥಾನದಲ್ಲಿದೆ.

ಅಮರಿಕದಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ ಇಡೀ ವಿಶ್ವದಲ್ಲೇ ಹೆಚ್ಚಾಗಿದೆ. ನಂತರದ ಸ್ಥಾನಗಳಲ್ಲಿರುವ ಸ್ಪೇನ್ ಮತ್ತು ಇಟಲಿಯಲ್ಲಿ ಕ್ರಮವಾಗಿ 158,273 ಮತ್ತು 147,577 ಪ್ರಕರಣಗಳು ದೃಢಪಟ್ಟಿವೆ.
ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮೊದಲ ಕಾಣಿಸಿಕೊಂಡ ಮಾರಕ ವೈರಸ್ ನ ಸೋಂಕು ಇಲ್ಲಿಯವರೆಗೆ ವಿಶ್ವದಾದ್ಯಂತ ಒಟ್ಟು 1,696,139 ಜನರಿಗೆ ತಗುಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.