ಕೊರೋನ ವೈರಸ್: 72,000 ಗಡಿ ದಾಟಿದ ಸಾವು, 13 ಲಕ್ಷಕ್ಕೂಹೆಚ್ಚು ಜನರನ್ನು ವ್ಯಾಪಿಸಿದ ವೈರಸ್
ಚೀನಾದಲ್ಲಿ ಮೊದಲ ಪತ್ತೆಯಾಗಿ ನಂತರದ ದಿನಗಲಲ್ಲಿ ಯುರೋಪ್ ದೇಶಗಳನ್ನೇ ಕೇಂದ್ರ ಸ್ಥಾನವಾಗಿ ಮಾಡಿಕೊಂಡ ಕೊರೋನಾ ಸೋಂಕು ಇದೀಗ 13 ಲಕ್ಷಕ್ಕೂ ಹೆಚ್ಚು ಜನರಿಗೆ ವ್ಯಾಪಾಸಿದ್ದು, 72,000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ.

ಪ್ಯಾರಿಸ್: ಚೀನಾದಲ್ಲಿ ಮೊದಲ ಪತ್ತೆಯಾಗಿ ನಂತರದ ದಿನಗಲಲ್ಲಿ ಯುರೋಪ್ ದೇಶಗಳನ್ನೇ ಕೇಂದ್ರ ಸ್ಥಾನವಾಗಿ ಮಾಡಿಕೊಂಡ ಕೊರೋನಾ ಸೋಂಕು ಇದೀಗ 13 ಲಕ್ಷಕ್ಕೂ ಹೆಚ್ಚು ಜನರಿಗೆ ವ್ಯಾಪಾಸಿದ್ದು, 72,000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ.
ಕಳೆದೊಂದ ತಿಂಗಳ ಅವಧಿಯಲ್ಲಿ ಸೋಂಕು ವಿಶ್ವವ್ಯಾಪಿಯಾದ ರೀತಿ ಮತ್ತು ಹಬ್ಬಿದ ಪರಿ ಎಲ್ಲರನ್ನೂ ಆತಂತಕ್ಕೀಡು ಮಾಡಿದೆ. ಪ್ರಸಕ್ತ ವಿಶ್ವದ 210 ದೇಶಗಳಲ್ಲಿ ಹಬ್ಬಿರುವ ಕೊರೋನಾ ಸರಿಯಾಗಿ ಒಂದು ತಿಂಗಳ ಹಿಂದೆ ಅಂದರೆ ಮಾ.6ರಂದು ಮೊದಲ ಬಾರಿಗೆ 1 ಲಕ್ಷದ ಗಡಿ ದಾಟಿತ್ತು. ಆದರೆ, ಏ.6ರಂದು ಸೋಂಕು 13 ಲಕ್ಷ ಜನರಿಗೆ ತಗುಲಿದೆ. ್ಂದರೆ, ಒಂದೇ ತಿಂಗಳಲ್ಲಿ 12 ಲಕ್ಷ ಜನರಿಗೆ ವ್ಯಾಪಿಸಿದೆ.
ಇನ್ನು ಜ.22ಕ್ಕೆ ಮೊದಲ ಸಾವು ಸಂಭವಿಸಿದ್ದರೆ, ಫೆ.10ರಂದು ಮೊದಲ ಬಾರಿಗೆ ಸಾವಿನ ಸಂಖ್ಯೆ 1000ದ ಗಡಿ ದಾಟಿತ್ತು. ಅದಾದ ಕೇವಲ 2 ತಿಂಗಳ ಅವಧಿಯಲ್ಲಿ ಸಾವಿನ ಸಂಖ್ಯೆ 75000 ತಲುಪಿದೆ. ಅಮೆರಿಕಾದಲ್ಲಿ ಸಾವಿನ ಸಂಖ್ಯೆ 10 ಸಾವಿರ, ಬ್ರಿಟನ್ ನಲ್ಲಿ 5 ಸಾವಿರದ ಗಡಿ ದಾಟಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


