ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ, ಮುಂದಿದೆ ಅಚ್ಚೆ ದಿನ: ರಾಣಿ ಎಲಿಜಬೆತ್
ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ `ಕೊರೋನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ದೇಶದಲ್ಲಿ ಮುಂದೆ ಉತ್ತಮ ದಿನಗಳು ಮರಳಿ ಬರಲಿವೆ ಎಂದು ರಾಣಿ ಎಲಿಜಬೆತ್ ಹೇಳಿದ್ದಾರೆ

ಲಂಡನ್ : ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ `ಕೊರೋನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ದೇಶದಲ್ಲಿ ಮುಂದೆ ಉತ್ತಮ ದಿನಗಳು ಮರಳಿ ಬರಲಿವೆ ಎಂದು ರಾಣಿ ಎಲಿಜಬೆತ್ ಹೇಳಿದ್ದಾರೆ
ಭಾನುವಾರ ರಾತ್ರಿ ಪ್ರಸಾರ ಭಾಷಣ ಮಾಡಿದ ಅವರು, ಜನತೆ ಭರವಸೆ, ಆತ್ಮ ವಿಶ್ವಾಸ ಕಳೆದು ಕೊಳ್ಳುವುದು ಬೇಡ, ಕರೋನ ವಿರುದ್ಧದ ಹೋರಾಟದಲ್ಲಿ ಬ್ರಿಟನ್ ಯಶಸ್ವಿಯಾಗಲಿದೆ ಎಂದು ಧೈರ್ಯ ತುಂಬಿದ್ದಾರೆ
ಕೊರೋನವೈರಸ್ ಹಾವಳಿ ಬಗ್ಗೆ ಹೇಗೆ ಪ್ರತಿಕ್ರಿಯಿಸಲಿ, ಹೆಚ್ಚು ಸವಾಲಿನ ಸಮಯದಲ್ಲಿ ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ ದೇಶದಲ್ಲಿ ಉತ್ತಮ ದಿನಗಳು ಮರಳಿ ಬರಲಿವೆ ಕೊರೋನಾ ವಿರುದ್ಧದ ಹೋರಾಟದಲ್ಲಿ ದೇಶ ಯಶಸ್ವಿಯಾಗಲಿದೆ ಎಂಬ ನಂಬಿಕೆಯಿದೆ ಎಂದಿದ್ದಾರೆ.
ದೇಶದ ಜನರ ಜೀವನಕ್ಕೆ ಅಡ್ಡಿಯಾಗಿದ್ದು ಕೆಲವರಿಗೆ ತಂದಿರುವ ನೋವು ಸಂಕಟವನ್ನು ವಿವರಿಸಿದ್ದಾರೆ ಅನೇಕರಿಗೆ ಆರ್ಥಿಕ ತೊಂದರೆಗಳಾಗಿದೆ, ದೈನಂದಿನ ಜೀವನದಲ್ಲಿ ಅಗಾಧ ಬದಲಾವಣೆ ಆಗಿರುವ ಕುರಿತಂತೆ ರಾಣಿ ಎಲಿಜಬೆತ್ ಮಾತನಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


