ಹೌಡಿ ಮೋದಿ: ಪೋಡಿಯಂ ನಲ್ಲಿ ಅಧ್ಯಕ್ಷರ ಲಾಂಛನದ ಬದಲು ರಾರಾಜಿಸಿದ ಇಂಡೋ-ಯುಎಸ್ ಧ್ವಜ; ಐತಿಹಾಸಿಕ ಘಟನೆ!
ಸದೃಢಗೊಳ್ಳುತ್ತಿರುವ ಅಮೆರಿಕ-ಭಾರತ ದ್ವಿಪಕ್ಷೀಯ ಸಂಬಂಧಕ್ಕೆ ಸಾಕ್ಷಿಯಾಗಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿದ್ದ ಪೋಡಿಯಂ ಲೆಕ್ಟರ್ನ್ ನಲ್ಲಿ ಅಮೆರಿಕ ಅಧ್ಯಕ್ಷೀಯ ಲಾಂಛನದ ಬದಲು ಭಾರತ-ಅಮೆರಿಕ ದೋಸ್ತಿ ಧ್ವಜ ರಾರಾಜಿಸಿದೆ.

ಹ್ಯೂಸ್ಟನ್: ಸದೃಢಗೊಳ್ಳುತ್ತಿರುವ ಅಮೆರಿಕ-ಭಾರತ ದ್ವಿಪಕ್ಷೀಯ ಸಂಬಂಧಕ್ಕೆ ಸಾಕ್ಷಿಯಾಗಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿದ್ದ ಪೋಡಿಯಂ ಲೆಕ್ಟರ್ನ್ ನಲ್ಲಿ ಅಮೆರಿಕ ಅಧ್ಯಕ್ಷೀಯ ಲಾಂಛನದ ಬದಲು ಭಾರತ-ಅಮೆರಿಕ ದೋಸ್ತಿ ಧ್ವಜ ರಾರಾಜಿಸಿದೆ.
ಅಮೆರಿಕ ಅಧ್ಯಕ್ಷರು ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರೂ ಅಲ್ಲಿನ ಲೆಕ್ಟರ್ನ್(ನಿಲುಪೀಠ)ದಲ್ಲಿ ಅಧ್ಯಕ್ಷೀಯ ಲಾಂಛನ ಇರುವುದು ಅಲ್ಲಿನ ಸಂಪ್ರದಾಯ. ಯಾವುದೇ ವಿದೇಶಿ ನಾಯಕ ಬಂದರೂ ಸಹ ಜಂಟಿ ಸುದ್ದಿಗೋಷ್ಠಿಯ ವೇಳೆಯೂ ಈ ಸಂಪ್ರದಾಯವನ್ನು ಅಮೆರಿಕ ಅಧ್ಯಕ್ಷರು ಮುರಿದಿರಲಿಲ್ಲ.
ಅಮೆರಿಕ ಅಧ್ಯಕ್ಷರು ವಿದೇಶಕ್ಕೆ ತೆರಳಿದಾಗಲೂ ಸಹ ಇದೇ ಸಂಪ್ರದಾಯವನ್ನು ಪಾಲಿಸಲಾಗುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಹೌಡಿ-ಮೋದಿ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷರು ತಮ್ಮ ಎಂದಿನ ಸಂಪ್ರದಾಯವನ್ನು ಮುರಿದು, ಭಾರತ-ಅಮೆರಿಕ ದೋಸ್ತಿ ಧ್ವಜ ರಾರಾಜಿಸುತ್ತಿದ್ದ ಪೋಡಿಯಂ ನಲ್ಲಿ ನಿಂತು ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ್ದಾರೆ.
ಅಮೆರಿಕ ಅಧ್ಯಕ್ಷರು ಇತಿಹಾಸದಲ್ಲೇ ಮೊದಲ ಬಾರಿಗೆ ಈ ರೀತಿ ಮಾಡಿರುವುದು, ಅಮೆರಿಕ-ಭಾರತದ ಸ್ನೇಹ ಸದೃಢಗೊಳ್ಳುತ್ತಿರುವುದಕ್ಕೆ ಹಾಗೂ ಜಾಗತಿಕ ಮಟ್ಟದಲ್ಲಿ ವಿಶ್ವದ ದೊಡ್ಡಣ್ಣ ಭಾರತಕ್ಕೆ ನೀಡುತ್ತಿರುವ ಮನ್ನಣೆ ನೀಡಿರುವುದು ಎಲ್ಲರ ಹುಬ್ಬೇರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


