ವಿದೇಶ

ಮೊದಲು ಅಣ್ವಸ್ತ್ರ ಬಳಕೆ ಮಾಡಲ್ಲ ಎಂಬ ನಿಯಮವೇನೂ ಇಲ್ಲ: ಪಾಕ್ ಸೇನೆಯ ಉದ್ಧಟತನ

ಪಾಕಿಸ್ತಾನ ಮೊದಲು ಅಣ್ವಸ್ತ್ರ ಬಳಕೆ ಮಾಡುವುದಿಲ್ಲ ಎಂಬ ನಿಯಮವೇನೂ ಇಲ್ಲ. ಎದುರಾಳಿಗಳ ದಾಳಿ ಸಾಧ್ಯತೆ ಅರಿಯುತ್ತಲೇ ನಾವೇ ಮೊದಲು ಅಣ್ವಸ್ತ್ರಗಳನ್ನು ಪ್ರಯೋಗ ಮಾಡಬಹುದು ಎಂದು ಪಾಕಿಸ್ತಾನ ಸೇನೆ ಉದ್ಧಟತನದ ಹೇಳಿಕೆ ನೀಡಿದೆ.

ಮೊದಲು ಅಣ್ವಸ್ತ್ರ ಬಳಕೆ ಮಾಡಲ್ಲ ಎಂಬ ನಿಯಮವೇನೂ ಇಲ್ಲ: ಪಾಕ್ ಸೇನೆಯ ಉದ್ಧಟತನ
ಸಂಗ್ರಹ ಚಿತ್ರ
Published On :

ಇಸ್ಲಾಮಾಬಾದ್: ಪಾಕಿಸ್ತಾನ ಮೊದಲು ಅಣ್ವಸ್ತ್ರ ಬಳಕೆ ಮಾಡುವುದಿಲ್ಲ ಎಂಬ ನಿಯಮವೇನೂ ಇಲ್ಲ. ಎದುರಾಳಿಗಳ ದಾಳಿ ಸಾಧ್ಯತೆ ಅರಿಯುತ್ತಲೇ ನಾವೇ ಮೊದಲು ಅಣ್ವಸ್ತ್ರಗಳನ್ನು ಪ್ರಯೋಗ ಮಾಡಬಹುದು ಎಂದು ಪಾಕಿಸ್ತಾನ ಸೇನೆ ಉದ್ಧಟತನದ ಹೇಳಿಕೆ ನೀಡಿದೆ.

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪಾಕಿಸ್ತಾನ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್, ಪಾಕಿಸ್ತಾನ ಮೊದಲು ಅಣ್ವಸ್ತ್ರ ಬಳಕೆ ಮಾಡುವುದಿಲ್ಲ ಎಂಬ ನಿಯಮವೇನೂ ಇಲ್ಲ. ಎದುರಾಳಿಗಳ ದಾಳಿ ಸಾಧ್ಯತೆ ಅರಿಯುತ್ತಲೇ ನಾವೇ ಮೊದಲು ಅಣ್ವಸ್ತ್ರಗಳನ್ನು ಪ್ರಯೋಗ ಮಾಡಬಹುದು ಎಂದು ಹೇಳಿದ್ದಾರೆ.

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಣ್ವಸ್ತ್ರ ಮೊದಲು ಬಳಕೆ ಮಾಡುವುದಿಲ್ಲ ಎಂಬ ಭಾರತದ ನಿಯಮವನ್ನು ನಾವು ಮರು ಪರಿಶೀಲಿಸಬೇಕಾಗುತ್ತದೆ ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ನಮಗೆ ಯಾವ ನಿಯಮವೂ ಇಲ್ಲ. ಇದು ಭಾರತಕ್ಕೆ ಬಿಟ್ಟ ವಿಚಾರ. ನಾವು ಅಣ್ವಸ್ತ್ರ ಬಳಕೆ ಮಾಡಬೇಕೆ ಅಥವಾ ಇಲ್ಲವೇ ಎಂಬುದು ಆ ದೇಶ ಕೈಗೊಳ್ಳುವ ನಿರ್ಣಯಗಳ ಮೇಲೆ ಆಧಾರಿತವಾಗಿರುತ್ತದೆ. ದೇಶದ ಅಸ್ತಿತ್ನಕ್ಕೆ ಧಕ್ಕೆಯಾಗುವ ಯಾವುದೇ ಹುಚ್ಚು ಸಾಹಸಕ್ಕೆ ಭಾರತ ಕೈ ಹಾಕಿದರೆ, ನಾವು ಅಣ್ವಸ್ತ್ರಗಳಿಗೆ ಕೈಹಾಕಬೇಕಾಗುತ್ತದೆ ಎಂದು ಗಫೂರ್ ಎಚ್ಚರಿಕೆ ನೀಡಿದ್ದಾರೆ.

ಇನ್ನು ಈ ಹಿಂದೆಯೂ ಕೂಡ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕೂಡ ಭಾರತದ ವಿರುದ್ಧ ಅಣ್ವಸ್ತ್ಪ ಪ್ರಯೋಗಿಸುವ ಮಾತನಾಡಿದ್ದರು. ಇದರ ಬೆನ್ನಲ್ಲೇ ಪಾಕ್ ಸೇನೆಯ ಈ ಹೇಳಿಕೆ ಅವರ ಯುದ್ಧೋನ್ಮಾದದ ಪ್ರದರ್ಶನವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.