ಉತ್ತರ ಪ್ರದೇಶ: ಕಚೇರಿಯೇ ಇಲ್ಲದೇ ನಡೆಯುತ್ತಿದೆ ಕಾಂಗ್ರೆಸ್ ಪಕ್ಷದ ಚಟುವಟಿಕೆ, ವಾಟ್ಸ್ ಆಪ್ ಸದ್ಯದ ಕಚೇರಿ!
ಕಾಂಗ್ರೆಸ್ ನ ರಾಷ್ಟ್ರಾಧ್ಯಕ್ಷರು ಪ್ರತಿನಿಧಿಸುವ ಕ್ಷೇತ್ರವಿರುವ ಉತ್ತರ ಪ್ರದೇಶ ರಾಜ್ಯದ ಗೋರಖ್ ಪುರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಚೇರಿಯೇ ಇಲ್ಲದಂತಾಗಿದೆ.

ಗೋರಖ್ ಪುರ: ಕಾಂಗ್ರೆಸ್ ನ ರಾಷ್ಟ್ರಾಧ್ಯಕ್ಷರು ಪ್ರತಿನಿಧಿಸುವ ಕ್ಷೇತ್ರವಿರುವ ಉತ್ತರ ಪ್ರದೇಶ ರಾಜ್ಯದ ಗೋರಖ್ ಪುರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಚೇರಿಯೇ ಇಲ್ಲದಂತಾಗಿದೆ.
ಗೋರಖ್ ಪುರದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ವಾಟ್ಸ್ ಆಪ್ ಮೂಲಕವೇ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಗೋರಖ್ ಪುರದಲ್ಲಿ ಪಕ್ಷದ ಪರಿಸ್ಥಿತಿಯ ಬಗ್ಗೆ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ವಾದ್ರ ಅವರಿಗೆ ತಿಳಿಸಿದ್ದರೂ ಸಹ ಯಾವುದೇ ಪ್ರತಿಕ್ರಿಯೆ ಅವರಿಂದ ಈ ವರೆಗೂ ಬಂದಿಲ್ಲ ಎನ್ನುತ್ತಾರೆ ಕಾಂಗ್ರೆಸ್ ಅಧ್ಯಕ್ಷ ನಿರ್ಮಲಾ ಪಾಸ್ವಾನ್ ಹೇಳಿದ್ದಾರೆ.
ಆದಾಗ್ಯೂ ಹೊಸ ಕಚೇರಿಯನ್ನು ಶೀಘ್ರವೇ ಸ್ಥಾಪಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ. 2017 ರವರೆಗೂ ಮಾಜಿ ಜಿಲ್ಲಾಧ್ಯಕ್ಷ ಸಯೀದ್ ಜಮಾಲ್ ಅವರು ಪ್ರಾರಂಭಿಸಿದ್ದ ಕಚೇರಿ ಇತ್ತು. 2017 ರಲ್ಲಿ ಮಾಲಿಕತ್ವದ ಹಕ್ಕುಗಳ ವಿಚಾರವಾಗಿ ಬೆರೆಯವರಿಗೆ ಅದನ್ನು ಬಿಟ್ಟುಕೊಡಬೇಕಾಯಿತು. ಈಗ ಸರಿಯಾದ ಕಚೇರಿ ಇಲ್ಲದೇ ಇರುವುದರಿಂದ ವಿವಾಹಗಳು ನಡೆಯಲಿರುವ ಸ್ಥಳಗಳಲ್ಲಿ ಪಕ್ಷದ ಸಭೆಗಳನ್ನು ನಡೆಸಲಾಗುತ್ತಿದೆ, ಉಳಿದ ಸಂದರ್ಭಗಳಲ್ಲಿ ವಾಟ್ಸ್ ಆಪ್ ಮೂಲಕ ಸಭೆಗಳನ್ನು ನಡೆಸಲಾಗುತ್ತದೆ ಎಂದು ನಿರ್ಮಲಾ ಪಾಸ್ವಾನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


