ಗೋರಖ್ ಪುರ

ಉತ್ತರ ಪ್ರದೇಶ: ಬಸ್‌ಗೆ ಟ್ರಕ್ ಡಿಕ್ಕಿ ಹೊಡೆದು 6 ಜನರ ಸಾವು, 27 ಮಂದಿಗೆ ಗಾಯ
ಜಗದೀಶ್‌ಪುರ ಸಮೀಪದ ಗೋರಖ್‌ಪುರ-ಕುಶಿನಗರ ಹೆದ್ದಾರಿಯಲ್ಲಿ ವೇಗವಾಗಿ ಬಂದ ಟ್ರಕ್ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, 27 ಮಂದಿ ಗಾಯಗೊಂಡಿದ್ದಾರೆ.

ಕಾಂಗ್ರೆಸ್ ನಿರ್ಮಿಸಿದ ರೈಲ್ವೆ, ವಿಮಾನ ನಿಲ್ದಾಣ, ರಸ್ತೆಗಳನ್ನು ಬಿಜೆಪಿ ಮಾರುತ್ತಿದೆ- ಪ್ರಿಯಾಂಕಾ ಗಾಂಧಿ
ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ನಿರ್ಮಿಸಿರುವುದನ್ನು ಬಿಜೆಪಿ ಮಾರಾಟ ಮಾಡುತ್ತಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭಾನುವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗೋರಖ್ ಪುರ ಹೋಟೆಲ್ ದಾಳಿಯಲ್ಲಿ ಉದ್ಯಮಿ ಸಾವು ಪ್ರಕರಣ: ಆರು ಪೊಲೀಸ್ ಸಿಬ್ಬಂದಿ ಅಮಾನತು
ಗೋರಖ್ ಪುರ್ ದಾಳಿ ಪ್ರಕರಣದಲ್ಲಿ ಕಾನ್ಪುರ ಮೂಲದ ಉದ್ಯಮಿ ಸಾವನ್ನಪ್ಪಿದ ಕೇಸ್ ಗೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಆರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.

ಗೋರಖ್‌ಪುರ: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಕೋವಿಡ್-19 ಪಾಸಿಟಿವ್ ಮಹಿಳೆ, ಒಂದು ಮಗು ವೆಂಟಿಲೇಟರ್ ನಲ್ಲಿ
ಉತ್ತರ ಪ್ರದೇಶದ ಗೋರಖ್ ಪುರ ಜಿಲ್ಲೆಯ ಬಿಆರ್ ಡಿ ವೈದ್ಯಕೀಯ ಕಾಲೇಜಿನಲ್ಲಿ ಕೊರೋನಾವೈರಸ್ ಪಾಸಿಟಿವ್ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವುದಾಗಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಪಾಕ್ ಐಎಸ್ಐ ಗೆ ಕರಾಚಿಯ ಸೆಕ್ಸ್ ವರ್ಕರ್ ಮೂಲಕ ಗೋರಖ್ ಪುರದ ವ್ಯಕ್ತಿಯ ನೇಮಕ: ಸ್ಫೋಟಕ ಮಾಹಿತಿ ಬಹಿರಂಗ!
ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್ಐ ಭಾರತದಲ್ಲಿ ತನಗಾಗಿ ಕೆಲಸ ಮಾಡುವುದಕ್ಕೆ ಗೋರಖ್ ಪುರದ ವ್ಯಕ್ತಿಯೋರ್ವನನ್ನು ಕರಾಚಿಯ ಸೆಕ್ಸ್ ವರ್ಕರ್ ಮೂಲಕ ಬಲೆಗೆ ಕೆಡವಲು ಯತ್ನಿಸಿದ್ದ ಕೃತ್ಯ ಬಹಿರಂಗವಾಗಿದೆ.

25 ಗಂಟೆಗಳಲ್ಲಿ ತಲುಪಬೇಕಾದ ರೈಲು ದಾರಿ ತಪ್ಪಿ ನಿಲ್ದಾಣ ಸೇರಿದ್ದು ಎರಡುವರೆ ದಿನದ ನಂತರ!
ಮಹಾರಾಷ್ಟ್ರದಿಂದ ಉತ್ತರ ಪ್ರದೇಶದ ಗೋರಖ್ ಪುರಕ್ಕೆ ರೈಲಿನಲ್ಲಿ 25 ಗಂಟೆಗಳ ಪ್ರಯಾಣ, ಆದರೆ ಮಹಾರಾಷ್ಟ್ರದಿಂದ ಕಾರ್ಮಿಕರನ್ನು ಹೊತ್ತು ಸಾಗಿದ್ದ ಶ್ರಮಿಕ್ ವಿಶೇಷ ರೈಲು ತಲುಪಿದ್ದು ಬರೊಬ್ಬರಿ ಎರಡು ದಿನಗಳ ನಂತರ!

ಉತ್ತರ ಪ್ರದೇಶ: ಕಚೇರಿಯೇ ಇಲ್ಲದೇ ನಡೆಯುತ್ತಿದೆ ಕಾಂಗ್ರೆಸ್ ಪಕ್ಷದ ಚಟುವಟಿಕೆ, ವಾಟ್ಸ್ ಆಪ್ ಸದ್ಯದ ಕಚೇರಿ!
ಕಾಂಗ್ರೆಸ್ ನ ರಾಷ್ಟ್ರಾಧ್ಯಕ್ಷರು ಪ್ರತಿನಿಧಿಸುವ ಕ್ಷೇತ್ರವಿರುವ ಉತ್ತರ ಪ್ರದೇಶ ರಾಜ್ಯದ ಗೋರಖ್ ಪುರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಚೇರಿಯೇ ಇಲ್ಲದಂತಾಗಿದೆ.

ಕಿಸಾನ್ ಸಮ್ಮಾನ್ ಯೋಜನೆ ನಿಮ್ಮ ಹಕ್ಕು, ರಾಜ್ಯಗಳ ಪಾತ್ರವಿಲ್ಲ, ಅಪಪ್ರಚಾರ ಮಾಡುವವರಿಗೆ ಪಾಠ ಕಲಿಸಿ: ರೈತರಿಗೆ ಮೋದಿ ಕರೆ
ರೈತರನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ ರೈತರಿಗೆ ತಮ್ಮ ಸರ್ಕಾರ ನೀಡಿರುವ ಕೊಡುಗೆಗಳನ್ನು ಹೇಳುತ್ತಲೇ ವಿಪಕ್ಷಗಳ ವೈಫಲ್ಯದ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.

ಗೋರಖ್ ಪುರ ಶಿಶು ಸಾವು ಪ್ರಕರಣದ ವೈದ್ಯ ಕಫೀಲ್ ಖಾನ್ ಸಹೋದರನ ಮೇಲೆ ಗುಂಡಿನ ದಾಳಿ
ಗೋರಖ್ ಪುರ ಬಿಆರ್ ಡಿ ಆಸ್ಪತ್ರೆಯ ಶಿಶುಗಳ ಸರಣಿ ಸಾವು ಪ್ರಕರಣದ ಆರೋಪಿ ವೈದ್ಯ ಡಾ.ಕಫೀಲ್ ಖಾನ್ ರ ಸಹೋದರ ಕಸೀಫ್ ಜಮೀಲ್ ಎಂಬುವವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.

