ಸಂಸ್ಕೃತದಲ್ಲಿ ಟ್ವೀಟ್ ಮಾಡಿ ಸುದ್ದಿಯಾದ ಪಾಪ್ ತಾರೆ ಲೇಡಿ ಗಾಗಾ
ಅಮೆರಿಕದ ಖ್ಯಾತ ಪಾಪ್ ತಾರೆ ಲೇಡಿ ಗಾಗಾ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ಅವರು ಮಾಡಿದ ಕಾರ್ಯ ಭಾರತೀಯರ ಮೆಚ್ಚುಗೆ ಗಳಿಸಿದೆ.

ನವದೆಹಲಿ: ಅಮೆರಿಕದ ಖ್ಯಾತ ಪಾಪ್ ತಾರೆ ಲೇಡಿ ಗಾಗಾ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ಅವರು ಮಾಡಿದ ಕಾರ್ಯ ಭಾರತೀಯರ ಮೆಚ್ಚುಗೆ ಗಳಿಸಿದೆ.
ಹೌದು.. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂಸ್ಕೃತದಲ್ಲಿ ಟ್ವೀಟ್ ಮಾಡುವ ಮೂಲಕ ಲೇಡಿಗಾಗಾ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಲೇಡಿ ಗಾಗಾ ಸಂಸ್ಕೃತದಲ್ಲಿ ಲೋಕಾಃ ಸಮಸ್ತಾಃ ಸುಖಿನೋ ಭವಂತು ಎಂದು ಟ್ವೀಟ್ ಮಾಡಿದ್ದಾರೆ. ಇದರ ಅರ್ಥ ಪ್ರಪಂಚದಲ್ಲಿರುವ ಎಲ್ಲರೂ ಸುಖ ಸಂತೋಷದಿಂದ ಜೀವನ ನಡೆಸಲಿ ಎಂಬುದಾಗಿದೆ.
ಇನ್ನು ಲೇಡಿಗಾಗಾ ಮಾಡಿರುವ ಈ ಟ್ವೀಟ್ ನ ಅರ್ಥ ತಿಳಿಯದ ಅವರ ಸಹಸ್ರಾರು ಅಭಿಮಾನಿಗಳು, ಇದು ಅವರ ಹೊಸ ಆಲ್ಬಂ ಹೆಸರೇ ಎಂದು ಪ್ರಶ್ನಿಸಿದರೆ, ಮತ್ತೆ ಕೆಲವರು ಇದರ ಅರ್ಥ ಹುಡುಕಾಟಕ್ಕೆ ಟ್ರಾನ್ಸ್ಲೇಟರ್ ಮೊರೆ ಹೋಗಿರುವುದಾಗಿ ತಿಳಿಸಿದ್ದಾರೆ.
ಆದರೆ ಭಾರತದ ಅವರ ಅಭಿಮಾನಿಗಳು ಮಾತ್ರ ಈ ಟ್ವೀಟ್ಗೆ ಹರ್ಷ ವ್ಯಕ್ತಪಡಿಸಿದ್ದು, ವಿದೇಶಿಯರು ಸಂಸ್ಕೃತ ಕಲಿಯುತ್ತಿರುವುದು, ವೇದಗಳನ್ನು ಪಠಿಸುವುದು ಖುಷಿ ತಂದಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


