ಭಾರತದ ಬಳಿಕ ಪಾಕ್ ಗೆ ಶಾಕ್ ಕೊಟ್ಟ ಆಫ್ಘಾನಿಸ್ತಾನ: ಹಣ್ಣು-ತರಕಾರಿಗಳ ಮೇಲಿನ ಸುಂಕ ಹೆಚ್ಚಳ?
ಕಾಶ್ಮೀರ ವಿಚಾರವಾಗಿ ಭಾರತವನ್ನು ಮೂಲೆಗುಂಪು ಮಾಡಲು ಹೋಗಿ ತಾನೇ ಮೂಲೆಗುಂಪಾಗಿರುವ ಪಾಕಿಸ್ತಾನಕ್ಕೆ ನೆರೆ ಆಫ್ಘಾನಿಸ್ತಾನ ಕೂಡ ಶಾಕ್ ನೀಡಲು ಮುಂದಾಗಿದ್ದು, ಪಾಕಿಸ್ತಾನದಿಂದ ಆಮದಾಗುವ ಹಣ್ಣು-ತರಕಾರಿಗಳ ಮೇಲಿನ ಸುಂಕ ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಕಾಬೂಲ್: ಕಾಶ್ಮೀರ ವಿಚಾರವಾಗಿ ಭಾರತವನ್ನು ಮೂಲೆಗುಂಪು ಮಾಡಲು ಹೋಗಿ ತಾನೇ ಮೂಲೆಗುಂಪಾಗಿರುವ ಪಾಕಿಸ್ತಾನಕ್ಕೆ ನೆರೆ ಆಫ್ಘಾನಿಸ್ತಾನ ಕೂಡ ಶಾಕ್ ನೀಡಲು ಮುಂದಾಗಿದ್ದು, ಪಾಕಿಸ್ತಾನದಿಂದ ಆಮದಾಗುವ ಹಣ್ಣು-ತರಕಾರಿಗಳ ಮೇಲಿನ ಸುಂಕ ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಹೌದು.. ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಆಫ್ಘಾನಿಸ್ತಾನ ಕೂಡ ಶಾಕ್ ನೀಡಲು ಮುಂದಾಗಿದ್ದು, ಪಾಕಿಸ್ತಾನದ ವಸ್ತುಗಳ ಮೇಲೆ ಆಮದು ಮೇಲಿನ ಸುಂಕ ಹೆಚ್ಚಿಸಲು ಆಫ್ಘನ್ ಪಾರಿಗಳು ತಮ್ಮ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಟೊಲೊ ನ್ಯೂಸ್ ವರದಿ ಮಾಡಿದ್ದು, ಹಣ್ಣು ಮತ್ತು ತರಕಾರಿಗಳ ಮೇಲಿನ ಸುಂಕವನ್ನು ಪಾಕಿಸ್ತಾನಕ್ಕೆ ಮಾತ್ರವಲ್ಲದೆ ಇರಾನ್ ದೇಶದ ಮೇಲೂ ಆಮದು ಸುಂಕ ಹೆಚ್ಚಿಸಬೇಕು ಎಂದು ವ್ಯಾಪಾರಿಗಳು ಸರ್ಕಾರಕ್ಕೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಸರ್ಕಾರಕ್ಕೆ ನೀಡಿರುವ ಈ ಮನವಿಯಲ್ಲಿ 'ದೇಶೀಯ ಮಾರುಕಟ್ಟೆಗಳು ಪ್ರಸ್ತುತ ಇರಾನ್ ಮತ್ತು ಪಾಕಿಸ್ತಾನದ ಹಣ್ಣುಗಳು ಮತ್ತು ತರಕಾರಿಗಳಿಂದ ತುಂಬಿವೆ. ಇವೆಲ್ಲವೂ ಅಫ್ಘಾನಿಸ್ತಾನದಲ್ಲಿಯೂ ದೊರೆಯುತ್ತವೆ. ಹೀಗಾಗಿ ಪಾಕಿಸ್ತಾನ ಮತ್ತು ಇರಾನ್ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸುವಂತೆ ವ್ಯಾಪಾರಿಗಳು ಕೋರಿದ್ದಾರೆ.
ಇನ್ನು ಇದೇ ವಿಚಾರವಾಗಿ ಆಫ್ಘನ್ ಸರ್ಕಾರದ ವಿರುದ್ಧವೂ ಕಿಡಿಕಾರಿರುವ ವ್ಯಾಪಾರಿಗಳು, 'ದೇಶೀಯ ಉತ್ಪಾದಕರನ್ನು ಉತ್ತೇಜಿಸಲು ಸರ್ಕಾರ ಏನನ್ನೂ ಮಾಡುತ್ತಿಲ್ಲ. ನಮ್ಮ ಹಣ್ಣಿನ ಋತುಮಾನ ಬಂದಾಗ, ಪಾಕಿಸ್ತಾನವು ಭಾರೀ ಸುಂಕವನ್ನು ವಿಧಿಸುತ್ತದೆ ಮತ್ತು ನಾವು ನಮ್ಮ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕು. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ದೇಶೀಯ ಕೃಷಿ ಮಾರುಕಟ್ಟೆಯು ಕಷ್ಟಕ್ಕೆ ಸಿಲುಕಲಿದೆ. ಆಲೂಗೆಡ್ಡೆ ರೈತರಿಗೆ ಸುಗ್ಗಿಯ ಕಾಲ ಬಂದಿದೆ, ಆದರೆ ಮಾರುಕಟ್ಟೆಯ ಕೊರತೆಯಿಂದಾಗಿ ಅವರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


