ಭಾರತದ ಮರಿಯಂ ತ್ರೇಸಿಯಾರಿಗೆ ಸಂತ ಪದವಿ ಘೋಷಿಸಿದ ಪೋಪ್ ಫ್ರಾನ್ಸಿಸ್
ಕೇರಳದ ಸಿಸ್ಟರ್ ಮರಿಯಂ ತ್ರೇಸಿಯಾ ಅವರಿಗೆ ಭಾನುವಾರ ವ್ಯಾಟಿಕನ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪೋಪ್ ಫ್ರಾನ್ಸಿಸ್ ಸಂತ ಪದವಿ ಘೋಷಿಸಿದರು.

ವ್ಯಾಟಿಕನ್ : ಕೇರಳದ ಸಿಸ್ಟರ್ ಮರಿಯಂ ತ್ರೇಸಿಯಾ ಅವರಿಗೆ ಭಾನುವಾರ ವ್ಯಾಟಿಕನ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪೋಪ್ ಫ್ರಾನ್ಸಿಸ್ ಸಂತ ಪದವಿ ಘೋಷಿಸಿದರು.
ಈ ವಿಶೇಷ ಸಮಾರಂಭದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ನೇತೃತ್ವದ ಭಾರತ ನಿಯೋಗ ಹಾಜರಿತ್ತು.
1876ರ ಏಪ್ರಿಲ್ 26 ರಂದು ಕೇರಳದ ತ್ರಿಶ್ಯೂರಿನಲ್ಲಿ ಜನಿಸಿದ್ದ ಮರಿಯಂ ತ್ರೇಸಿಯಾ, 1914ರಲ್ಲಿ ತ್ರಿಶ್ಯೂರಿನಲ್ಲಿ ಸಿಸ್ಟರ್ಸ್ ಆಫ್ ಹೋಲಿ ಫ್ಯಾಮಿಲಿ ಪ್ರಾರ್ಥನಾ ಸಭೆಯನ್ನು ಆರಂಭಿಸಿದ್ದರು. 1926ರ ಜೂನ್ 8 ರಂದು ನಿಧನ ಹೊಂದಿದ್ದರು.
ಏಪ್ರಿಲ್ 9, 200 ಇಸವಿಯಲ್ಲಿ ಅಂದಿನ ಪೋಪ್ ಜಾನ್ ಪಾಲ್ ಮರಿಯಂ ತ್ರೇಸಿಯಾ ಅವರನ್ನು ಪವಿತ್ರ ಎಂದು ಘೋಷಿಸಿದ್ದರು.ಸಿಸ್ಟರ್ ಆಫ್ ಹೋಲಿ ಫ್ಯಾಮಿಲಿಯ ಸದಸ್ಯರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಶುಭ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


