ಅದ್ಭುತ ಅನುಭವ, ಅತ್ಯಂತ ಆರಾಮದಾಯಕ: ರಫೆಲ್ ವಿಮಾನದಲ್ಲಿ ಹಾರಾಟ ನಡೆಸಿದ ರಾಜನಾಥ್ ಸಿಂಗ್
ಫ್ರಾನ್ಸ್ ನಿರ್ಮಿತ ರಫೆಲ್ ಯುದ್ಧ ವಿಮಾನದಲ್ಲಿನ ಹಾರಾಟ ಅದ್ಭುತ ಅನುಭವ ಮತ್ತು ಅತ್ಯಂತ ಆರಾಮದಾಯಕ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಬೋರ್ಡಾಕ್ಸ್: ಫ್ರಾನ್ಸ್ ನಿರ್ಮಿತ ರಫೆಲ್ ಯುದ್ಧ ವಿಮಾನದಲ್ಲಿನ ಹಾರಾಟ ಅದ್ಭುತ ಅನುಭವ ಮತ್ತು ಅತ್ಯಂತ ಆರಾಮದಾಯಕ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾರತದ ಬಹು ನಿರೀಕ್ಷಿತ ಡಸ್ಸಾಲ್ಟ್ ಏವಿಯೇಷನ್ ಸಂಸ್ಥೆ ನಿರ್ಮಿಕ ರಫೆಲ್ ಫೈಟರ್ ಜೆಟ್ ಯುದ್ಧ ವಿಮಾನದ ಹಸ್ತಾಂತರ ಬಳಿಕ ರಾಜನಾಥ್ ಸಿಂಗ್ ರಫೆಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ರಫೇಲ್ ಯುದ್ಧ ವಿಮಾನವನ್ನು ಯುದ್ಧ ವಿಮಾನ ತಯಾರಕ ಸಂಸ್ಥೆ ಡಸಾಲ್ಟ್ ಏವಿಯೇಷನ್‌ನ ಮುಖ್ಯ ಪೈಲಟ್ ಫಿಲಿಪ್ ಡುಚಾಟೊ ಚಲಾಯಿಸಿದರು.
ವಿಮಾನ ಹಾರಾಟದ ಬಳಿಕ ಮಾತನಾಡಿದ ರಾಜನಾಥ್ ಸಿಂಗ್, ವಿಮಾನದಲ್ಲಿ ಹಾರಾಟ ಬಹಳ ಮುದ ನೀಡಿದ್ದು, ಉತ್ತಮ ವಿಮಾನಲವಾಗಿದೆ. ಇದು ಸ್ಮರಣೀಯ ಕ್ಷಣವಾಗಿದ್ದು, ಈ ರೀತಿ ಸೂಪರ್ ಸಾನಿಕ್ ವೇಗದ ಯುದ್ಧ ವಿಮಾನದಲ್ಲಿ ಹೀಗೆ ಕುಳಿತು ಹಾರಾಟ ನಡೆಸುವ ಅವಕಾಶ ನನ್ನದಾಗುತ್ತದೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ರಫೇಲ್‌ನಲ್ಲಿನ ಹಾರಾಟ ಅದ್ಭುತ ಅನುಭವ. ಅತ್ಯಂತ ಆರಾಮದಾಯಕವೆನಿಸುವ ಹಾರಾಟ. ಅತಿವೇಗವಾಗಿ ಹಾರುವ ವಿಮಾನವೊಂದರಲ್ಲಿ ನಾನೂ ಮುಂದೊಂದು ದಿನ ಹಾರಾಟ ನಡೆಸುತ್ತೇನೆ ಎಂದು ನೆನೆಸಿರಲಿಲ್ಲ ಎಂದು ಹೇಳಿದರು.
ಅಂತೆಯೇ '2021ರ ವೇಳೆಗೆ 18 ವಿಮಾನಗಳು ಭಾರತಕ್ಕೆ ಲಭ್ಯವಾಗಲಿವೆ. 2022ರ ಏಪ್ರಿಲ್–ಮೇ ಹೊತ್ತಿಗೆ ಉಳಿದ ರಫೇಲ್ ವಿಮಾನಗಳು ಹಸ್ತಾಂತರಗೊಳ್ಳಲಿವೆ. ಇದು ನಮ್ಮ ರಕ್ಷಣೆಗಾಗಿಯೇ ಹೊರತು, ಯಾರಾದ್ದೋ ವಿರುದ್ಧ ಆಕ್ರಮಣಕ್ಕಲ್ಲ. ಇದು ರಕ್ಷಕ ವಿಮಾನ, ಎಂದೂ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದರು.
ಇದಕ್ಕೂ ಮೊದಲು ಫ್ರಾನ್ಸ್‌ನ ಬೊರಾಡೆಕ್ಸ್ ಸಮೀಪದ ಮೆರಿಗ್ನ್ಯಾಕ್ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಫೇಲ್ ಯುದ್ಧವಿಮಾನವನ್ನು ಭಾರತದ ಪರವಾಗಿ ಸ್ವೀಕರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


