ವಿದೇಶ

ಭಯಾನಕ ವಿಡಿಯೋ: ಪವಾಡ ಸದೃಶ್ಯ ರೀತಿಯಲ್ಲಿ ಸಾವಿನ ದವಡೆಯಿಂದ ಪ್ರಯಾಣಿಕ ಬಚಾವ್!

ಜನದಟ್ಟಣೆಯಿಂದ ಕೂಡಿದ ಕೊಲಿಜಿಯಂ ನಿಲ್ದಾಣದಲ್ಲಿ ರೈಲು ಬರುವ ಕೆಲ ಸೆಕೆಂಡ್ ಮುಂಚಿತವಾಗಿ ಹಳಿ ಮೇಲೆ ಬೀಳುತ್ತಿದ್ದ ಪ್ರಯಾಣಿಕರೊಬ್ಬರೊಬ್ಬರನ್ನು ಅಲ್ಲಿನ ಭದ್ರತಾ ಸಿಬ್ಬಂದಿ ಪವಾಡ ಸದೃಶ್ಯ ರೀತಿಯಲ್ಲಿ ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.

ಭಯಾನಕ ವಿಡಿಯೋ: ಪವಾಡ ಸದೃಶ್ಯ ರೀತಿಯಲ್ಲಿ ಸಾವಿನ ದವಡೆಯಿಂದ ಪ್ರಯಾಣಿಕ ಬಚಾವ್!
ರೈಲು ನಿಲ್ದಾಣದಲ್ಲಿ ಪ್ರಯಾಣಿಕನ ರಕ್ಷಣೆ
Published On :

ಕ್ಯಾಲಿಪೋರ್ನಿಯಾ: ಜನದಟ್ಟಣೆಯಿಂದ ಕೂಡಿದ  ಕೊಲಿಜಿಯಂ ನಿಲ್ದಾಣದಲ್ಲಿ ರೈಲು ಬರುವ ಕೆಲ ಸೆಕೆಂಡ್ ಮುಂಚಿತವಾಗಿ ಹಳಿ ಮೇಲೆ ಬೀಳುತ್ತಿದ್ದ ಪ್ರಯಾಣಿಕರೊಬ್ಬರೊಬ್ಬರನ್ನು ಅಲ್ಲಿನ ಭದ್ರತಾ ಸಿಬ್ಬಂದಿ ಪವಾಡ ಸದೃಶ್ಯ ರೀತಿಯಲ್ಲಿ ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. 

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೈಲು ಇನ್ನೇನು ಫ್ಲಾಟ್ ಫಾರಂಗೆ ಬಂದು ನಿಲ್ಲುವಷ್ಟರಲ್ಲಿ ಪ್ರಯಾಣಿಕ ಹಳಿ ಮೇಲೆ ಬೀಳುತ್ತಿರುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಧಾವಿಸಿದ ಭದ್ರತಾ ಸಿಬ್ಬಂದಿ, ಪ್ರಯಾಣಿಕ ಹಳಿ ಮೇಲೆ ಬೀಳದಂತೆ ಎಳೆದುಕೊಳ್ಳುತ್ತಾರೆ.

ಈ ದೃಶ್ಯ ನಿಲ್ದಾಣದಲ್ಲಿದ್ದ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಈ ಘಟನೆ ನಂತರ ಇಬ್ಬರು ವ್ಯಕ್ತಿಗಳು ಪರಸ್ಪರ ತಬ್ಬಿಕೊಂಡು ಸಾಂತ್ವನ ಹೇಳಿಕೊಳ್ಳುವ ದೃಶ್ಯ ಮತ್ತೊಂದು ವಿಡಿಯೋದಲ್ಲಿ ಸೆರೆಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.