ಭಾರತ ವಿಮಾನಗಳಿಗೆ ಪಾಕ್ ವಾಯುಪ್ರದೇಶಕ್ಕೆ 'ನೋ ಎಂಟ್ರಿ': ಮೇ 30ರವರೆಗೆ ನಿರ್ಬಂಧ ವಿಸ್ತರಣೆ
ಪಾಕಿಸ್ತಾನದ ಆಗಸದಲ್ಲಿ ಭಾರತದ ವಿಮಾನ ಹಾರಾಟಕ್ಕೆ ವಿಧಿಸಿರುವ ನಿರ್ಬಂಧವನ್ನು ಪಾಕ್ ಮೇ 30ರವರೆಗೆ ವಿಸ್ತರಿಸಿದೆ.

Published On :
ಇಸ್ಲಾಮಾಬಾದ್: ಪಾಕಿಸ್ತಾನದ ಆಗಸದಲ್ಲಿ ಭಾರತದ ವಿಮಾನ ಹಾರಾಟಕ್ಕೆ ವಿಧಿಸಿರುವ ನಿರ್ಬಂಧವನ್ನು ಪಾಕ್ ಮೇ 30ರವರೆಗೆ ವಿಸ್ತರಿಸಿದೆ. ಈ ನಡುವೆ ಭಾರತ ಲೋಕಸಭೆ ಚುನಾವಣೆ ಫಲಿತಾಂಶವನ್ನು ಕಾಯುತ್ತಿರುವ ಪಾಕಿಸ್ತಾನ ಚುನಾವಣೆ ಫಲಿತಾಂಶ ಏನಾಗಲಿದೆ ಎಂಬುದನ್ನು ನೋಡಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಯೋಜಿಸಿದೆ.
ಫೆಬ್ರವರಿ 26ರ ಬಾಲ್ ಕೋಟ್ ಜೈಶ್-ಇ-ಮೊಹಮ್ಮದ್ (ಜೆಎಂ) ಭಯೋತ್ಪಾದನಾ ಶಿಬಿರದ ಮೇಲೆ ಭಾರತೀಯ ವಾಯುಪಡೆ ನಡೆಸಿದ್ದ ಏರ್ ಸ್ಟ್ರೈಕ್ ನಂತರ ಪಾಕಿಸ್ತಾನ ಭಾರತದ ಪಾಲಿಗೆ ತನ್ನ ವಾಯುಪ್ರದೇಶವನ್ನು ಸಂಪೂರ್ಣ ಬಂದ್ ಮಾಡಿದೆ.ಆದರೆ ಮಾರ್ಚ್ 27ರಿಂದ ಪಾಕಿಸ್ತಾನ ನವದೆಹಲಿ, ಕೌಲಾಲಾಂಪುರ್, ಬಾಂಕಾಕ್ ಹೊರತು ಬೇರೆಲ್ಲಾ ಪ್ರದೇಶಗಳಿಗೆ ತೆರಳುವ ವಿಮಾನಕ್ಕೆ ತನ್ನ ವಾಯುಪ್ರದೇಶವನ್ನು ಮುಕ್ತವಾಗಿಸಿದೆ.
ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ತೆರೆಯುವ ಸಂಬಂಧ ಮರುಪರಿಶೀಲನೆ ನಡೆಸಲು ಭದ್ರತಾ ಮತ್ತು ವಾಯುಯಾನ ಸಚಿವಾಲಯದ ಉನ್ನತ ಅಧಿಕಾರಿಗಳು ಬುಧವಾರ ಸಭೆ ನಡೆಸಿದರು.ಅವರು ಪಾಕಿಸ್ತಾನದ ವಾಯುಪ್ರದೇಶವನ್ನು ಮೇ 30 ರವರೆಗೆ ಭಾರತೀಯ ವಿಮಾನಗಳಿಗೆ ಮುಕ್ತಗೊಳಿಸಬಾರದೆಂದು ತೀರ್ಮಾನಕ್ಕೆ ಬಂದಿದ್ದಾರೆ ಎಂಬುದಾಗಿ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಸಿವಿಲ್ ಏವಿಯೇಷನ್ ಅಥಾರಿಟಿ ವಿಮಾನ ಚಾಲಕರಿಗೆ ಈ ತೀರ್ಮಾನದ ಬಗೆಗೆ ವಿವರಿಸಿದೆ ಎಂದು ಅವರು ಹೇಳಿದ್ದಾರೆ.ಸಭೆಯ ಬಳಿಕ ಪೈಲಟ್ ಗಳಿಗೆ ಈ ಕುರಿತಂತೆ ನೋಟೀಸ್ ಜಾರಿಗೊಳಿಸಲಾಗಿದೆ.
ಮೇ 30ರಂದು ಪಾಕಿಸ್ತಾನಈ ಸಂಬಂಧ ತನ್ನ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pakistanಪಾಕಿಸ್ತಾನಭಾರತೀಯ ವಿಮಾನBalakot Air StrikePak airspaceIndian flightsಪಾಕ್ ವಾಯುಪ್ರದೇಶಬಾಲ್ ಕೋಟ್ ಏರ್ ಸ್ಟ್ರೈಕ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


