ವಿದೇಶ

ಪುಟ್ಟ ಮಗುವಿನೊಂದಿಗೆ ಮೃತಪಟ್ಟ ವಲಸಿಗ ತಂದೆ; ಟ್ರಂಪ್ ಮನಸ್ಸು ಕರಗಲ್ವ?

ಅಮೆರಿಕಕ್ಕೆ ವಲಸೆ ಹೋಗಬೇಕು ಎಂದು ಬಂದ ತಂದೆಯೊಬ್ಬ ಮಗುವಿನ ಜೊತೆಗೆ ನೀರು ಪಾಲಾಗಿರುವ ಘನ ಘೋರ ಘಟನೆ ಮೆಕ್ಸಿಕೋ ಗಡಿಯಲ್ಲಿ ನಡೆದಿದೆ.

ಪುಟ್ಟ ಮಗುವಿನೊಂದಿಗೆ ಮೃತಪಟ್ಟ ವಲಸಿಗ ತಂದೆ; ಟ್ರಂಪ್ ಮನಸ್ಸು ಕರಗಲ್ವ?
ಸಂಗ್ರಹ ಚಿತ್ರ
Published On :
ವಾಷಿಂಗ್ಟನ್: ಅಮೆರಿಕಕ್ಕೆ ವಲಸೆ ಹೋಗಬೇಕು ಎಂದು ಬಂದ ತಂದೆಯೊಬ್ಬ ಮಗುವಿನ ಜೊತೆಗೆ ನೀರು ಪಾಲಾಗಿರುವ ಘನ ಘೋರ ಘಟನೆ ಮೆಕ್ಸಿಕೋ ಗಡಿಯಲ್ಲಿ ನಡೆದಿದೆ.
ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದ 25 ವರ್ಷದ ಆಸ್ಕರ್ ಮಾರ್ಟೀನ್ಸ್ ರೆಮಿರೇಜ್ ತನ್ನ ಪತ್ನಿ ಮತ್ತು ಎರಡು ವರ್ಷದ ಹೆಣ್ಣು ಮಗುವಿನ ಜೊತೆ ಅಮೆರಿಕಕ್ಕೆ ವಲಸೆ ಹೋಗಲು ನಿರ್ಧರಿಸಿದ್ದಾನೆ. 
ಆದರೆ ಎಲ್ ಸಾಲ್ವಡಾರ್ ನವರು ಅಮೆರಿಕದ ಅಧಿಕಾರಿಗಳ ಬಳಿ ಆಶ್ರಯಕ್ಕಾಗಿ ಮನವಿ ಮಾಡುವಂತಿರಲಿಲ್ಲ. ಇದರಿಂದ ಬೇಸರಗೊಂಡ ರೆಮಿರೇಜ್ ಮೆಕ್ಸಿಕೋದ ರಿಯೋ ಗ್ರಾಂಡ್ ನದಿಯನ್ನು ಈಜಿ ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಹೋಗುವ ಅಪಾಯಕಾರಿ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ.
ಮೊದಲಿಗೆ ತನ್ನ ಮಗುವನ್ನು ಎತ್ತಿಕೊಂಡು ಈಜಿ ದಡ ಸೇರಿದ ರೆಮಿರೇಜ್ ಮಗುವನ್ನು ದಡದ ಮೇಲೆ ಕುಳಿಸಿ ಪತ್ನಿಯನ್ನು ಕರೆತರಲು ನದಿಗೆ ಜಿಗಿಯುತ್ತಾನೆ. ತಂದೆ ತನ್ನು ಬಿಟ್ಟು ಹೋಗುತ್ತಿದ್ದಾರೆ ಎಂದು ಭಾವಿಸಿದ ಮಗು ನದಿಗೆ ಜಿಗಿಯುತ್ತದೆ. ಇನ್ನು ಮಗು ನೀರು ಪಾಲಾಗುತ್ತಿದ್ದುದ್ದನ್ನು ಗಮನಿಸಿದ ರೆಮಿರೇಜ್ ಹಿಂದಕ್ಕೆ ಬಂದು ಮಗುವನ್ನು ರಕ್ಷಿಸುತ್ತಾನೆ. ಆದರೆ ನೀರಿನ ಪ್ರವಾಹಕ್ಕೆ ಸಿಲುಗಿ ಜಲಸಮಾಧಿಯಾಗಿದ್ದಾರೆ.
ಈ ಭೀಕರ ದೃಶ್ಯವನ್ನು ಕಂಡು ತಾಯಿ ತಾನಿಯಾ ವೆನೆಸ್ಸಾ ಅವಲೋಸ್ ಎದೆ ಬಡಿದುಕೊಂಡು ಕಣ್ಣೀರಿಟ್ಟಿರುವ ದೃಶ್ಯ ಮನಕಲಕುವಂತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.