ಬ್ರಿಟನ್ ಪೋಲ್ ನಲ್ಲೂ ವಿಶ್ವನಾಯಕರನ್ನು ಹಿಂದಿಕ್ಕಿ ಗೆದ್ದ ಮೋದಿ!
ಮೋದಿ ಜಾಗತಿಕ ಮಟ್ಟದ ನಾಯಕರೆಂಬುದು ಮತ್ತೊಮ್ಮೆ ಸಾಬೀತಾಗಿದ್ದು ಬ್ರಿಟನ್ ನಿಯತಕಾಲಿಕೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದಿದ್ದಾರೆ.

Published On :
ಲಂಡನ್: ಮೋದಿ ಜಾಗತಿಕ ಮಟ್ಟದ ನಾಯಕರೆಂಬುದು ಮತ್ತೊಮ್ಮೆ ಸಾಬೀತಾಗಿದ್ದು ಬ್ರಿಟನ್ ನಿಯತಕಾಲಿಕೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದಿದ್ದಾರೆ.
ಬ್ರಿಟನ್ ನ ನಿಯತಕಾಲಿಕೆ ಬ್ರಿಟೀಷ್ ಹೆರಾಲ್ಡ್ ವಿಶ್ವದ ಅತ್ಯಂತ ಪ್ರಬಲ ವ್ಯಕ್ತಿ 2019 ಕ್ಕೆ ಮತದಾನ ನಡೆಸಲಾಗಿತ್ತು, ಸ್ಪರ್ಧಿಗಳ ಪೈಕಿ ಪ್ರಧಾನಿ ನರೇಂದ್ರ ಮೋದಿ ಅವರು ಅತಿ ಹೆಚ್ಚು ಮತಗಳನ್ನು ಗಳಿಸಿದ್ದಾರೆ.
ವಿಶ್ವದ ಅಗ್ರಗಣ್ಯ ನಾಯಕರನ್ನು ಹಿಂದಿಕ್ಕಿರುವ ಪ್ರಧಾನಿ ನರೇಂದ್ರ ಮೋದಿ, ಶೇ.30.9 ರಷ್ಟು ಮತಗಳನ್ನು ಪಡೆದು ವಿಶ್ವದ ಅತ್ಯಂತ ಪ್ರಬಲ ವ್ಯಕ್ತಿ 2019ಯಾಗಿ ಹೊರಹೊಮ್ಮಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗೆ ಶೇ.29.9 ರಷ್ಟು ಮತಗಳು, ಡೊನಾಲ್ಡ್ ಟ್ರಂಪ್ ಗೆ ಶೇ.21.9 ರಷ್ಟು, ಚೀನಾದ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಗೆ ಶೇ.18.1 ರಷ್ಟು ಮತಗಳು ಲಭಿಸಿವೆ.
ಬ್ರಿಟೀಷ್ ಹೆರಾಲ್ಡ್ ನಡೆಸಿದ ಪೋಲ್ ನಲ್ಲಿ/ ಸಮೀಕ್ಷೆಯಲ್ಲಿ ಜಾಗತಿಕ ಮಟ್ಟದ 25 ನಾಯಕರ ಹೆಸರಿತ್ತು. ಕೊನೆಯ ಹಂತದಲ್ಲಿ ನಾಲ್ಕು ನಾಯಕರ ಹೆಸರನ್ನು ಅಂತಿಮಗೊಳಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
PM Narendra Modiಪ್ರಧಾನಿ ನರೇಂದ್ರ ಮೋದಿworld’s most powerful person 2019British Heraldವಿಶ್ವದ ಅತ್ಯಂತ ಪ್ರಬಲ ನಾಯಕ-2019ಬಿಟೀಷ್ ಹೆರಾಲ್ಡ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


