ಮಾಧ್ಯಮ ಸಹಕಾರಕ್ಕೆ ಸದಸ್ಯ ರಾಷ್ಟ್ರಗಳ ನಡುವೆ ಒಪ್ಪಂದ; ಎಸ್ ಸಿಒ ಶೃಂಗಸಭೆಯಲ್ಲಿ ನಿರ್ಣಯ
ಮಾಧ್ಯಮ ಕ್ಷೇತ್ರದಲ್ಲಿನ ಸಹಕಾರ ಒಪ್ಪಂದಕ್ಕೆ ಶಾಂಘೈ ಸಹಕಾರ ಸಂಘಟನೆ (ಎಸ್ ಸಿಒ) ಸದಸ್ಯ ರಾಷ್ಟ್ರಗಳು ಸಹಿ ಹಾಕುವ ಮೂಲಕ ಶೃಂಗಸಭೆ ನಿರ್ಣಯ ಕೈಗೊಂಡಿದೆ.

Published On :
ಬಿಶ್ಕೆಕ್: ಮಾಧ್ಯಮ ಕ್ಷೇತ್ರದಲ್ಲಿನ ಸಹಕಾರ ಒಪ್ಪಂದಕ್ಕೆ ಶಾಂಘೈ ಸಹಕಾರ ಸಂಘಟನೆ (ಎಸ್ ಸಿಒ) ಸದಸ್ಯ ರಾಷ್ಟ್ರಗಳು ಸಹಿ ಹಾಕುವ ಮೂಲಕ ಶೃಂಗಸಭೆ ನಿರ್ಣಯ ಕೈಗೊಂಡಿದೆ.
ಕಿರ್ಗಿಸ್ತಾನ ರಾಜಧಾನಿಯಲ್ಲಿ ಬಿಸ್ಕೆಕ್ ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ (ಎಸ್ ಸಿಒ) ಸದಸ್ಯರ ಸಮಾವೇಶದಲ್ಲಿ ಮಾಧ್ಯದ ಕ್ಷೇತ್ರದಲ್ಲಿ ಸಹಕಾರ ಒಪ್ಪಂದಕ್ಕೆ ಸದಸ್ಯ ರಾಷ್ಟ್ರಗಳು ಸಹಿ ಹಾಕಿವೆ ಎಂದು ರಷ್ಯಾದ ಸಾಮೂಹಿಕ ಸಂವಹನ ಸಚಿವಾಲಯ ತಿಳಿಸಿದೆ.
"ಪ್ರಮುಖವಾಗಿ ಪರಸ್ಪರ ಮಾಹಿತಿಯನ್ನು ಹಂಚಿಕೊಳ್ಳಲು ಲಾಭದಾಯಕ ಸ್ಥಿತಿಯ ಸೃಷ್ಟಿ ಹಾಗೂ ಸದಸ್ಯ ರಾಷ್ಟ್ರಗಳ ಸಂಪಾದಕೀಯ ಕಚೇರಿಗಳಲ್ಲಿ ಪರಸ್ಪರ ಸಹಕಾರ, ವೃತ್ತಿಪರ ಅನುಭವದ ಹಂಚಿಕೆ, ಸಭೆ ನಡೆಸುವುದು, ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯಾಗಾರ ಮತ್ತು ಸಮ್ಮೇಳನಗಳು ಹಮ್ಮಿಕೊಳ್ಳುವುದು ಹಾಗೂ ಟಿವಿ ಪ್ರಸಾರ ಮತ್ತು ರೇಡಿಯೊ ಕಾರ್ಯಕ್ರಮಗಳಲ್ಲಿ ಪರಸ್ಪರ ಸಹಕಾರ ಇತ್ಯಾದಿ" ಎಂದು ಶುಕ್ರವಾರ ತಡರಾತ್ರಿ ಸಾಮೂಹಿಕ ಸಂವಹನ ಸಚಿವಾಲಯದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಇನ್ನು ಶೃಂಗಸಭೆ ಸಮಾರೋಪ ಕಾರ್ಯಕ್ರಮದಲ್ಲಿ ರಷ್ಯಾದ ಸಂವಹನ ಇಲಾಖೆಯ ಉಪ ಸಚಿವ ಅಲೆಕ್ಸಾಂಡರ್ ವೊಲಿನ್ ಪಾಲ್ಗೊಂಡಿದ್ದರು.
ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಇಂದು ನವದೆಹಲಿಗೆ ವಾಪಸ್ ಆಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತPM Modiಪ್ರಧಾನಿ ಮೋದಿAfghanistanಆಫ್ಘಾನಿಸ್ತಾನAshraf GhaniSCO SummitBishkekಬಿಶ್ಕೆಕ್ಎಸ್ ಸಿಒ ಶೃಂಗಸಭೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


