ಪ್ರವಾಹದ ನೀರಲ್ಲಿ ಕುತ್ತಿಗೆ ಹೊರಗು ಮುಳುಗಿ ಪಾಕ್ ಪತ್ರಕರ್ತ ವರದಿ, ಟ್ರೋಲ್: ವಿಡಿಯೋ ವೈರಲ್!
ಪಾಕ್ ಪತ್ರಕರ್ತರು ಕೆಲವೊಮ್ಮೆ ವಿಭಿನ್ನವಾಗಿ ವರದಿ ಮಾಡುವ ಮೂಲಕ ಜಗತ್ತಿನ ಕಣ್ಣಿಗೆ ಹಾಸ್ಯಾಸ್ಪದವಾಗಿ ಕಾಣಿಸಿಕೊಳ್ಳುತ್ತಾರೆ. ಇದೀಗ ಪ್ರವಾಹದ ನಡುವೆ ನಿಂತು ಪಾಕ್ ಪತ್ರಕರ್ತನೊಬ್ಬ ವರದಿ...

Published On :
ಇಸ್ಲಾಮಾಬಾದ್: ಪಾಕ್ ಪತ್ರಕರ್ತರು ಕೆಲವೊಮ್ಮೆ ವಿಭಿನ್ನವಾಗಿ ವರದಿ ಮಾಡುವ ಮೂಲಕ ಜಗತ್ತಿನ ಕಣ್ಣಿಗೆ ಹಾಸ್ಯಾಸ್ಪದವಾಗಿ ಕಾಣಿಸಿಕೊಳ್ಳುತ್ತಾರೆ. ಇದೀಗ ಪ್ರವಾಹದ ನಡುವೆ ನಿಂತು ಪಾಕ್ ಪತ್ರಕರ್ತನೊಬ್ಬ ವರದಿ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಜನರನ್ನು ಮೆಚ್ಚಿಸುವ ಸಲುವಾಗಿ ಪಾಕ್ ಪತ್ರಕರ್ತರು ಎಂತಹ ಹುಚ್ಚು ಸಾಹಸಕ್ಕೂ ಮುಂದಾಗುತ್ತಾರೆ. ಜಿಟಿವಿ ಖಾಸಗಿ ಮಾಧ್ಯಮದ ಪರ್ತಕರ್ತ ಅಜಾದಾರ್ ಹುಸೇನ್ ಎಂಬುವರು ಪ್ರವಾಹದಲ್ಲಿ ನಿಂತು ವರದಿ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಹಾಸ್ಯಾತ್ಮಕವಾಗಿ ಟ್ವೀಟ್ ಮಾಡುತ್ತಾ ಪತ್ರಕರ್ತನ ಕಾಲೆಳೆಯುತ್ತಿದ್ದಾರೆ. ಇನ್ನು ಕೆಲವರು ಪುಲ್ಟಿಜರ್ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಎಂದು ವ್ಯಂಗ್ಯವಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


