ವಿದೇಶ

ಇಸ್ರೇಲ್ : ಎಲೆಕ್ಷನ್ ಬ್ಯಾನರ್ ನಲ್ಲಿ ನೇತನ್ಯಾಹು ಜೊತೆಗೆ ಪ್ರಧಾನಿ ಮೋದಿ ಮಿಂಚಿಂಗ್!

ಇಸ್ರೇಲ್ ನಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಎಲೆಕ್ಷನ್ ಬ್ಯಾನರ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಂಚುತ್ತಿದ್ದಾರೆ. ಇಸ್ರೇಲ್ ಪ್ರಧಾನಿ ನೇತನ್ಯಾಹು ಜೊತೆಗಿರುವ ಪೋಟೋಗಳು ಅಲ್ಲಿನ ಕಟ್ಟಡಗಳ ಮೇಲೆ ರಾರಾಜಿಸುತ್ತಿವೆ.

ಇಸ್ರೇಲ್ : ಎಲೆಕ್ಷನ್ ಬ್ಯಾನರ್ ನಲ್ಲಿ ನೇತನ್ಯಾಹು ಜೊತೆಗೆ ಪ್ರಧಾನಿ ಮೋದಿ ಮಿಂಚಿಂಗ್!
ಎಲೆಕ್ಷನ್ ಬ್ಯಾನರ್
Published On :
ಇಸ್ರೇಲ್: ಇಸ್ರೇಲ್ ನಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಎಲೆಕ್ಷನ್ ಬ್ಯಾನರ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ  ಮಿಂಚುತ್ತಿದ್ದಾರೆ. ನರೇಂದ್ರ ಮೋದಿ ಅವರ ಆಪ್ತ ಸ್ನೇಹಿತರಾಗಿರುವ  ಇಸ್ರೇಲ್ ಪ್ರಧಾನಿ ನೇತನ್ಯಾಹು ಜೊತೆಗಿರುವ ಪೋಟೋಗಳು ಅಲ್ಲಿನ ಕಟ್ಟಡಗಳ ಮೇಲೆ ರಾರಾಜಿಸುತ್ತಿವೆ. 
ಕಟ್ಟಡ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಪೋಟೋ ಇರುವ ಎಲೆಕ್ಷನ್ ಬ್ಯಾನರ್ ವೊಂದನ್ನು ಇಸ್ರೇಲ್ ಪತ್ರಕರ್ತ ಅಮಿಚೈ ಸ್ಟೇಯಿನ್ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.  
ಇದೇ ರೀತಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್  ಟ್ರಂಪ್, ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಜೊತೆಗೆ ನೇತನ್ಯಾಹು ಇರುವ ಪೋಟೋಗಳು ಕೂಡಾ ಕಟ್ಟಡಗಳ ಮೇಲೆ ರಾರಾಜಿಸುತ್ತಿವೆ.
ನೇತನ್ಯಾಹು ಚುನಾವಣಾ ಜಾಹೀರಾತು , ಪುಟಿನ್ , ಟ್ರಂಪ್  ಮತ್ತು ಮೋದಿ ಎಂಬ ಅಡಿಬರಹ ನೀಡಿ ಅಮಿಚೈ ಸ್ಟೇಯಿನ್ ಈ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಸೆಪ್ಟೆಂಬರ್ 17 ರಂದು ಇಸ್ರೇಲ್ ನಲ್ಲಿ ಚುನಾವಣೆ ನಡೆಯಲಿದ್ದು, ವಿಶ್ವ ನಾಯಕರೊಂದಿಗೆ ನೇತನ್ಯಾಹು  ಒಪ್ಪಂದ ಮಾಡಿಕೊಳ್ಳುವ ಮೂಲಕ ದೇಶದ ಪ್ರಗತಿಗೆ ಶ್ರಮಿಸುತ್ತಿರುವ ವಿಚಾರವನ್ನು  ಚುನಾವಣಾ ಬ್ಯಾನರ್ ನಲ್ಲಿ ತಿಳಿಸಲಾಗುತ್ತಿದೆ.ಇಸ್ರೇಲ್ ನಲ್ಲಿ ಬಹುದಿನಗಳ ಕಾಲ ಆಡಳಿತ ನಡೆಸಿರುವ ನೇತನ್ಯಾಹು ಈ ಬಾರಿ ಭಾರಿ ಸವಾಲು ಎದುರಿಸುತ್ತಿದ್ದಾರೆ. 
ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಇಸ್ರೇಲ್  ಆರ್ಥಿಕ, ರಕ್ಷಣಾ  ಮತ್ತಿತರ ವಲಯಗಳಲ್ಲಿ ಒಪ್ಪಂದ ಮಾಡಿಕೊಳ್ಳುವ ಮೂಲಕ ಉಭಯ ದೇಶಗಳ ನಡುವೆ ಉತ್ತಮ ಸಂಬಂಧವಿದೆ. ಮೋದಿ ಎರಡನೇ ಬಾರಿಗೆ ಅಧಿಕಾರಕ್ಕೇರಿದಾಗ ವಿಶ್ವದ ಮೊದಲ ನಾಯಕರಾಗಿ ನೇತನ್ಯಾಹು ದೂರವಾಣಿ ಮೂಲಕ ಶುಭ ಕೋರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.