ವಿದೇಶ

ಕರಾಚಿ: ಪಾಕ್ ಟಿವಿ ಆಂಕರ್ ಗೆ ಗುಂಡಿಕ್ಕಿ ಹತ್ಯೆ

ಪಾಕಿಸ್ತಾನದ ಟಿವಿ ಆಂಕರ್ ನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನ ಕರಾಚಿ ಪಟ್ಟಣದಲ್ಲಿ ನಡೆದಿದೆ.

ಕರಾಚಿ: ಪಾಕ್ ಟಿವಿ ಆಂಕರ್ ಗೆ ಗುಂಡಿಕ್ಕಿ ಹತ್ಯೆ
ಮುರೀದ್ ಅಬ್ಬಾಸ್
Published On :
ಕರಾಚಿ: ಪಾಕಿಸ್ತಾನದ ಟಿವಿ ಆಂಕರ್ ನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನ ಕರಾಚಿ ಪಟ್ಟಣದಲ್ಲಿ ನಡೆದಿದೆ.
ವೈಯುಕ್ತಿಕ ಕಾರಣಗಳಿಂಡ ಉಂಟಾದ ಜಗಳ ಮುರೀದ್ ಅಬ್ಬಾಸ್ ಎಂಬ ಟಿವಿ ಆಂಕರ್ ಪ್ರಾಣಕ್ಕೆ ಕುತ್ತು ತಂದಿದೆ. ಮುರೀದ್ ಪಾಕಿಸ್ತಾನದ ಬೋಲ್ ನ್ಯೂಸ್ ಚಾನೆಲ್ ನಲ್ಲಿ ಆಂಕರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಖೈಯಾಬಾನ್ ಇ ಬುಖಾರಿ ಪ್ರದೇಶದ ಕೆಫೆಯೊಂದರ ಹೊರಭಾಗದಲ್ಲಿ ಈ ಕೃತ್ಯ ನಡೆದಿದೆ. ಪಾಕ್ ಮಾದ್ಯಮಗಳ ಪ್ರಕಾರ ಮುರೀದ್ ಮೇಲೆ ಅತೀಫ್ ಝಮಾನ್ ಎಂಬಾತನೇ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.
ಈ ವೇಳೆ ಮುರೀದ್ ಗೆಳೆಯನ ಮೇಲೆಯೂ ಗುಂಡು ಹಾರಿಸಲಾಗಿದೆ. ಆದರೆ ಇಬರನ್ನೂ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮುರೀದ್ ಸಾವನ್ನಪ್ಪಿದ್ದಾರೆ.
ಇನ್ನು ಶಂಕಿತ ಶೂಟರ್ ಅನ್ನು ಪೋಲೀಸರು ಸೆರೆ ಹಿಡಿದಿದ್ದಾರೆ. ಆತನೂ ಸಹ ಪೋಲೀಸ್ ಕಸ್ಟಡಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದನೆಂದು ಡಾನ್ ಪತ್ರಿಕೆ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.