2020: ರಿಯೋ ಡಿ ಜನೈರೊ ಜಗತ್ತಿನ ವಾಸ್ತುಶಿಲ್ಪಗಳ ರಾಜಧಾನಿ, ಯುನೆಸ್ಕೋ ಘೋಷಣೆ
2020ರ ಜಗತ್ತಿನ ವಾಸ್ತುಶಿಲ್ಪಗಳ ರಾಜಧಾನಿ ಎಂದು ರಿಯೋ ಡಿ ಜನೈರೊವನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ(ಯುನೆಸ್ಕೋ) ಗುರುತಿಸಿದೆ.

Published On :
ಅಮೆರಿಕ: 2020ರ ಜಗತ್ತಿನ ವಾಸ್ತುಶಿಲ್ಪಗಳ ರಾಜಧಾನಿ ಎಂದು ರಿಯೋ ಡಿ ಜನೈರೊವನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ(ಯುನೆಸ್ಕೋ) ಗುರುತಿಸಿದೆ.
ನಗರ ಅಭಿವೃದ್ಧಿ ವಾಸ್ತುಶಿಲ್ಪ ಮತ್ತು ಸಂಸ್ಕೃತಿ ಪ್ರಚುರ ಪಡಿಸುವಲ್ಲಿ ನಿರ್ಣಾಯಕ ಪಾತ್ರ ಪ್ರದರ್ಶಿಸಿದ್ದ ರಿಯೋ ಡಿ ಜನೈರೊದ ವಾಸ್ತುಶಿಲ್ಫದ ಗುಣಮಟ್ಟ, ವ್ಯಾಪ್ತಿ ಮತ್ತು ಅದರ ಚಟುವಟಿಕೆಗಳ ಮೂಲಕ ಇದನ್ನು ಜಗತ್ತಿನ ವಾಸ್ತುಶಿಲ್ಪಗಳ ರಾಜಧಾನಿ ಎಂದು ಗುರುತಿಸಲಾಗಿದೆ ಎಂದು ಯುನೆಸ್ಕೋದ ಸಹಾಯಕ ನಿರ್ದೇಶಕ ಅರ್ನೆಸ್ಟೊ ಒಟ್ಟೊನ್ ಹೇಳಿದ್ದಾರೆ.
ಪ್ಯಾರಿಸ್ ಮತ್ತು ಮೆಲ್ಬರ್ನ್ ನಗರಗಳನ್ನೇ ಹಿಂದಿಕ್ಕಿ ರಿಯೋ 2020ರ ಜುಲೈನಲ್ಲಿ ನಡೆಯಲಿರುವ ಇಂಟರ್ ನ್ಯಾಷನಲ್ ಯೂನಿಯನ್ ಆಫ್ ಆರ್ಕಿಟೆಕ್ಟ್ಸ್(ಯುಐಎ) ವಿಶ್ವ ಕಾಂಗ್ರೆಸ್ 27ನೇ ಆವೃತ್ತಿಗೆ ಆತಿಥ್ಯ ವಹಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಅಮೆರಿಕUNESCOಯುನೆಸ್ಕೋAmericaRio de Janeiroರಿಯೊ ಡಿ ಜನೈರೊWorld Capital of Architectureಜಗತ್ತಿನ ವಾಸ್ತುಶಿಲ್ಪ ರಾಜಧಾನಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


