ಯೂಟ್ಯೂಬ್ ಮೂಲಕ ವರ್ಷಕ್ಕೆ 2.6 ಕೋಟಿ ರೂ. ಸಂಪಾದಿಸಿದ 8ರ ಪುಟ್ಟ ಪೋರ
ಕೇವಲ 8 ವರ್ಷದ ಪುಟ್ಟ ಬಾಲಕನೊಬ್ಬ ಬರೊಬ್ಬರಿ 2.6 ಕೋಟಿ ರೂ ಸಂಪಾದನೆ ಮಾಡಿ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾನೆ.

ನ್ಯೂಯಾರ್ಕ್: ಕೇವಲ 8 ವರ್ಷದ ಪುಟ್ಟ ಬಾಲಕನೊಬ್ಬ ಬರೊಬ್ಬರಿ 2.6 ಕೋಟಿ ರೂ ಸಂಪಾದನೆ ಮಾಡಿ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾನೆ.
ಹೌದು.. 2019ನೇ ಸಾಲಿನಲ್ಲಿ ಯೂಟ್ಯೂಬ್ ಚಾನಲ್ ಮೂಲಕ ಅತಿ ಹೆಚ್ಚು ಹಣ ಸಂಪಾದಿಸಿದ 8 ವರ್ಷದ ಬಾಲಕ ರಿಯಾನ್ ಕಾಜಿ ಪೋರ್ಬ್ಸ್ ಪಟ್ಟಿಯಲ್ಲಿ ವರ್ಷದ ಅತಿ ಹೆಚ್ಚು ಸಂಪಾದಿಸಿದ ಯೂಟ್ಯೂಬರ್ ಎನಿಸಿಕೊಂಡಿದ್ದಾನೆ. ರಯಾನ್ ಗೌನ್ ಯೂಟ್ಯೂಬ್ ಚಾನಲ್ ಮೂಲಕ ಈ ವರ್ಷ 26 ಮಿಲಿಯನ್ ಡಾಲರ್ ಅಂದರೆ 2.6 ಕೋಟಿ ರೂ. ಸಂಪಾದನೆ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾನೆ.
ರಿಯಾನ್ ಕಾಜಿ ಯೂಟ್ಯೂಬ್ ನಲ್ಲಿ ರ್ಯಾನ್ಸ್ ವರ್ಲ್ಡ್(Ryan’s World) ಚಾನಲ್ ಹೊಂದಿದ್ದು, 2015ರಲ್ಲಿ ಅಂದರೆ ಕಾಜಿ ಮೂರು ವರ್ಷದವನಾಗಿದ್ದಾಗ ಆತನ ಪೋಷಕರು ಈ ಚಾನಲ್ ಅನ್ನು ತೆರೆದಿದ್ದರು. ಇದೀಗ ರ್ಯಾನ್ ಚಾನಲ್ಗೆ 22.9 ಮಿಲಿಯನ್ ಚಂದಾದಾರರಿದ್ದಾರೆ. ಮೊದಲಿಗೆ ರಯಾನ್ ಟಾಯ್ಸ್ ರೀವ್ಯೂ ಎಂದು ಕರೆಯಲಾಗುತ್ತಿತ್ತು. ಮುಚ್ಚಿದ ಬಾಕ್ಸ್ಗಳನ್ನು ತೆರೆದು ಅದರಲ್ಲಿರುವ ಆಟಿಕೆಗಳನ್ನು ತೆಗೆದು ಅದರೊಂದಿಗೆ ಆಡುವ ವಿಡಿಯೋಗಳು ಚಾನಲ್ನಲ್ಲಿ ಅಪ್ಲೋಡ್ ಮಾಡಲಾಗುತ್ತಿತ್ತು. ಅದರಲ್ಲಿ ಅನೇಕ ವಿಡಿಯೋಗಳು ಬಿಲಿಯನ್ಸ್ಗಟ್ಟಲೇ ವೀಕ್ಷಣೆ ಪಡೆದುಕೊಂಡಿವೆ.
ಅಮೆರಿಕಾದ ವಕಾಲತು ಸಂಸ್ಥೆಯು ವಿಡಿಯೋದಲ್ಲಿನ ಜಾಹಿರಾತು ಸತ್ಯವನ್ನು ಪ್ರಶ್ನಿಸಿ ಯುಎಸ್ ಫೆಡೆರಲ್ ಟ್ರೇಡ್ ಕಮಿಷನ್ನಲ್ಲಿ ದೂರು ನೀಡಲಾಗಿತ್ತು. ಉತ್ಪನ್ನಗಳನ್ನು ಪರಿಚಯಿಸಲು ಕೆಲವು ಬ್ರ್ಯಾಂಡ್ಗಳು ಪ್ರಾಯೋಜಕತ್ವವನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಸೂಚಿಸಿಲ್ಲ ಎಂದು ದೂರಲಾಗಿತ್ತು. ಇದೇ ಕಾರಣಕ್ಕೆ ಇತ್ತೀಚೆಗಷ್ಟೇ ಕಾಜಿ ಚಾನಲ್ ಹೆಸರನ್ನು ರಯಾನ್ಸ್ ವರ್ಲ್ಡ್ ಎಂದು ಬದಲಾಯಿಸಿಕೊಂಡಿದ್ದ. ಇತ್ತೀಚೆಗೆ ಆಟಿಕೆಗಳಿಗೆ ಹೆಚ್ಚುವರಿಯಾಗಿ ಕಲಿಕಾ ಸಂಬಂಧದ ವಿಡಿಯೋಗಳನ್ನು ರಯಾನ್ ಯುಟ್ಯೂಬ್ನಲ್ಲಿ ಹರಿಬಿಡುತ್ತಿದ್ದು ಬಾಲ್ಯಾವಧಿಯಲ್ಲಿಯೇ ಕೋಟಿ ರೂ. ಸಂಪಾದನೆ ಮಾಡುವ ಮೂಲಕ ಕೋಟ್ಯಧಿಪತಿಯಾಗಿದ್ದಾನೆ.
ವಿಶೇಷವೆಂದರೆ 2018ರಲ್ಲೂ 22 ಮಿಲಿಯನ್ ಡಾಲರ್(2.2 ಕೋಟಿ ರೂ.) ಮೂಲಕ ಪೋರ್ಬ್ಸ್ ಪಟ್ಟಿಯಲ್ಲಿ ಕಾಜಿ ಸ್ಥಾನ ಪಡೆದಿದ್ದನು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


