ಸ್ತನ ಕ್ಯಾನ್ಸರ್ ಪರೀಕ್ಷೆ ನೆಪದಲ್ಲಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಕಿಲಾಡಿ ಡಾಕ್ಟರ್!
ತನ್ನ ಬಳಿಗೆ ಬರುತ್ತಿದ್ದ ಕ್ಯಾನ್ಸರ್ ಪೀಡಿತ ಮಹಿಳಾ ರೋಗಿಗಳಿಗೆ ಕ್ಯಾನ್ಸರ್ ಬಗೆಗಿರುವ ಅವರ ಭಯವನ್ನೇ ಬಂಡವಾಳವನ್ನಾಗಿಸಿಕೊಂಡು ಲೈಣ್ಗಿಕ ಕಿರುಕುಳ ನೀಡುತ್ತಿದ್ದ ಭಾರತೀಯ ಮೂಲದ ವೈದ್ಯನೊಬ್ಬ ಇದೀಗ ಯುಕೆ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ.

ಲಂಡನ್: ತನ್ನ ಬಳಿಗೆ ಬರುತ್ತಿದ್ದ ಕ್ಯಾನ್ಸರ್ ಪೀಡಿತ ಮಹಿಳಾ ರೋಗಿಗಳಿಗೆ ಕ್ಯಾನ್ಸರ್ ಬಗೆಗಿರುವ ಅವರ ಭಯವನ್ನೇ ಬಂಡವಾಳವನ್ನಾಗಿಸಿಕೊಂಡು ಲೈಣ್ಗಿಕ ಕಿರುಕುಳ ನೀಡುತ್ತಿದ್ದ ಭಾರತೀಯ ಮೂಲದ ವೈದ್ಯನೊಬ್ಬ ಇದೀಗ ಯುಕೆ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ.
23 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪೂರ್ವ ಲಂಡನ್ ನ ಮೇವ್ನೇ ಮೆಡಿಕಲ್ ಸೆಂಟರ್ ನಲ್ಲಿ ವೈದ್ಯಕೀಯ ವೃತ್ತಿಯನ್ನು ನಿರ್ವಹಿಸುತ್ತಿದ್ದ ಮನೀಶ್ ಶಾ ಎಂಬಾತನು ಅಪರಾಧಿ ಎಂದು ಲಂಡನ್ನ ಓಲ್ಡ್ ಬೈಲಿ ನ್ಯಾಯಾಲಯ ಹೇಳಿದೆ.
ಹಾಲಿವುಡ್ ತಾರೆ ಏಂಜಲೀನಾ ಜೋಲೀ ಕ್ಯಾನ್ಸರ್ ಪ್ರಕರಣದ ಸುದ್ದಿಯನ್ನು ಶಾ ತನಗೆ ಬೇಕಾದಂತೆ ಬಳಸಿಕೊಂಡಿದ್ದು ತನ್ನತ್ತ ಬರುವ ಮಹಿಳಾ ರೋಗಿಗಳಿಗೆ ಸ್ತನ ಪರೀಕ್ಷೆ ನಡೆಸಿಕೊಳ್ಳುವಂತೆ ಪ್ರೇರಿಸುತ್ತಿದ್ದ. ಏಂಜಲೀನಾ ಜೋಲೀ ಕ್ಯಾನ್ಸರ್ ಚಿಕಿತ್ಸೆಗಾಗಿ ಮ್ಯಾಸ್ಟೆಕ್ಟಮಿ ಮಾಡಿಸಿಕೊಂಡಿರುವುದನ್ನು ಹೇಳಿ ನೀವೂ ಮಾಡಿಸಿಕೊಳ್ಲಬೇಕೆಂದು ಸಲಹೆ ನೀಡುತ್ತಿದ್ದ. ಹಾಗೆ ಸ್ತನ ಪರೀಕ್ಷೆಗೆ ಒಪ್ಪಿದ ಮಹಿಳೆಯರಿಗೆ ಸ್ತನ ಪರೀಕ್ಷೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿತ್ತಿದ್ದ.
ಮೇ 2009 ಮತ್ತು ಜೂನ್ 2013 ರ ನಡುವೆ ಶಾ ಪೂರ್ವ ಲಂಡನ್ನ ಮಾವ್ನಿ ವೈದ್ಯಕೀಯ ಕೇಂದ್ರದ ಆರು ರೋಗಿಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಅದರಲ್ಲಿ 11 ವರ್ದ ಅಪ್ರಾಪ್ತೆಯೂ ಸೇರಿದ್ದಾಳೆ. ಅಲ್ಲದೆ ಬೇರೆಡೆ ಆತ 17 ಮಹಿಳೆಯರ ಮೇಲೆ ಇದೇ ಬಗೆಯಲ್ಲಿ ಅತ್ಯಾಚಾರ ಯತ್ನ ನಡೆಸಿದ್ದಾನೆ.ಇದೀಗ ನ್ಯಾಯಾಲಯ ಶಾ ಅಪರಾಧಿ ಎಂದು ತೀರ್ಪು ನೀಡಿದ್ದು ನ್ಯಾಯಾಧೀಶ ಅನ್ನಿ ಮೊಲಿನ್ಯೂಕ್ಸ್ಫೆಬ್ರವರಿ 7, 2020ರಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


