ವಿದೇಶ

ಭೀಕರ ವಿಡಿಯೋ: ಸರ್ಕಸ್‌ನಲ್ಲಿ ತರಬೇತುದಾರನ ಮೇಲೆ ಸಿಂಹ ದಾಳಿ, ಭಯಭೀತರಾದ ಪ್ರೇಕ್ಷಕರು!

ಮನುಷ್ಯ ಎಷ್ಟೇ ಚಾಕು ಚಕ್ಯತೆ ತೋರಿ ಪ್ರಾಣಿಗಳನ್ನು ಪಳಗಿಸಿದರೂ ಅದರ ಮೃಗೀಯ ವರ್ತನೆ ಮಾತ್ರ ಬದಲಾಗುವುದಿಲ್ಲ. ಇನ್ನು ಸರ್ಕಸ್ ಒಂದರಲ್ಲಿ ಸಿಂಹವೊಂದು ತರಬೇತುದಾರನ...

ಭೀಕರ ವಿಡಿಯೋ: ಸರ್ಕಸ್‌ನಲ್ಲಿ ತರಬೇತುದಾರನ ಮೇಲೆ ಸಿಂಹ ದಾಳಿ, ಭಯಭೀತರಾದ ಪ್ರೇಕ್ಷಕರು!
ಸಂಗ್ರಹ ಚಿತ್ರ
Published On :
ಮನುಷ್ಯ ಎಷ್ಟೇ ಚಾಕು ಚಕ್ಯತೆ ತೋರಿ ಪ್ರಾಣಿಗಳನ್ನು ಪಳಗಿಸಿದರೂ ಅದರ ಮೃಗೀಯ ವರ್ತನೆ ಮಾತ್ರ ಬದಲಾಗುವುದಿಲ್ಲ. ಇನ್ನು ಸರ್ಕಸ್ ಒಂದರಲ್ಲಿ ಸಿಂಹವೊಂದು ತರಬೇತುದಾರನ ಮೇಲೆ ದಾಳಿ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಉಕ್ರೇನ್ ಲುಗಾನ್ ಸ್ಕ್ ಪ್ರದೇಶದಲ್ಲಿ ನಡೆದ ಸರ್ಕಸ್ ವೇಳೆ ಸಿಟ್ಟಿಗೆದ್ದ ಸಿಂಹ ಏಕಾಏಕಿ ತರಬೇತುದಾರನ ಮೇಲೆ ದಾಳಿ ಮಾಡುತ್ತಿದ್ದಂತೆ ಪ್ರೇಕ್ಷಕರು ಭಯಭೀತಗೊಂಡರು. ಅದೃಷ್ಟವಶಾತ್ ತರಬೇತುದಾರ ಪ್ರಾಣಪಾಯದಿಂದ ಪಾರಾಗಿದ್ದಾನೆ. ದಾಳಿ ವೇಳೆ ಭುಜದ ಮೇಲೆ ಸಿಂಹದ ಹಲ್ಲು ಒಳಹೊಕ್ಕಿದ್ದು ಗಂಭೀರ ಗಾಯವಾಗಿದೆ. ಹೊಟ್ಟೆಯ ಮೇಲೂ ತರಚಿದ ಗಾಯವಾಗಿದೆ.
ಸರ್ಕಸ್ ಸಿಂಹ ತರಬೇತುದಾರನ ಮೇಲೆ ನಡೆಸಿದ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.