ಇಂಡೋನೇಷ್ಯಾ: ಪ್ರಬಲ ಭೂಕಂಪನ, ಸುನಾಮಿಗೆ ಕನಿಷ್ಠ 48 ಮಂದಿ ಬಲಿ, ಹಲವರ ನಾಪತ್ತೆ!
ಇಂಡೊನೇಷ್ಯಾದ ಸುಲಾವೇಸಿ ದ್ವೀಪದ ಪಲು ನಗರದಲ್ಲಿ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಸುನಾಮಿಯ ಹೊಡೆತಕ್ಕೆ ಸಿಲುಕಿ ಕನಿಷ್ಠ 48 ಮಂದಿ ಸಾವಿಗೀಡಾಗಿರಬಹುದು ಎಂದು ವರದಿಯಾಗಿದೆ.

Published On :
ಜಕಾರ್ತ: ಇಂಡೊನೇಷ್ಯಾದ ಸುಲಾವೇಸಿ ದ್ವೀಪದ ಪಲು ನಗರದಲ್ಲಿ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಸುನಾಮಿಯ ಹೊಡೆತಕ್ಕೆ ಸಿಲುಕಿ ಕನಿಷ್ಠ 48 ಮಂದಿ ಸಾವಿಗೀಡಾಗಿರಬಹುದು ಎಂದು ವರದಿಯಾಗಿದೆ.
ಭೂಕಂಪನದಿಂದಾಗಿ ಸುಲಾವೇಸಿ ದ್ವೀಪದ ಹಲವು ನಗರಗಳ ಬೃಹತ್ ಕಟ್ಟಡಗಳು ಕುಸಿದಿದ್ದು, ಪರಿಣಾಮ ಹಲವರು ಸಾವನ್ನಪ್ಪಿದ್ದಾರೆ. ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿ ಹಲವರು ಮೃತಪಟ್ಟರೆ, ಭೂಕಂಪನದ ಬಳಿಕ ದಿಢೀರ್ ಆಗಮಿಸಿದ ರಕ್ಕಸ ಸುನಾಮೆ ಅಲೆಗಳಿಗೆ ಸಿಲುಕಿ ಹಲವರು ಮೃತಪಟ್ಟಿದ್ದಾರೆ. ಇನ್ನು ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದು, ಪ್ರಸ್ತುತ ಕಟ್ಟಡಗಳ ಅವಶೇಷಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಇಲ್ಲಿನ ಆಸ್ಪತ್ರೆಯ ವೈದ್ಯರೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಈಗಾಗಲೇ 30 ಮಂದಿ ಸಾವಿಗೀಡಾಗಿದ್ದು ಮೃತ ದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನೂ 12 ಮಂದಿ ತೀವ್ರವಾಗಿ ಗಾಯಗೊಂಡಿದ್ದು ಮೂಳೆಗಳಿಗೆ ಸಂಬಂಧಿತ ಶಸ್ತ್ರ ಚಿಕಿತ್ಸೆ ನಡೆಸಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.
ಸುಲಾವೇಸಿ ದ್ವೀಪದಲ್ಲಿ ಸಂಭವಿಸಿದಭೂಕಂಪನ ರಿಕ್ಟರ್ ಮಾಪಕದಲ್ಲಿ 7.5ರಷ್ಟು ತೀವ್ರತೆ ದಾಖಲಾಗಿದ್ದು, ಗರಿಷ್ಠ 1.5 ಮೀಟರ್ ಎತ್ತರದಷ್ಟು ಸುನಾಮಿಯ ತೀವ್ರತೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಪಲು ಹಾಗೂ ಮೀನುಗಾರಿಕಾ ಪ್ರದೇಶ ಡೊಂಗಲಾ ಸುತ್ತಮುತ್ತಲು ಸಂಪರ್ಕ ಸಾಧಿಸಲು ತೊಡಕಾಗಿದೆ. ಭೂಕಂಪನದ ಕೇಂದ್ರ ಇಲ್ಲಿಂದ 27 ಕಿ.ಮೀ. ದೂರದಲ್ಲಿ ದಾಖಲಾಗಿದೆ. ಭೂಕಂಪನದಿಂದ ಕುಸಿದ ಕಟ್ಟಡಗಳ ಅಡಿಯಲ್ಲಿ ಸಿಲುಕಿ ಹೆಚ್ಚಿನ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


