ಸಮುದ್ರದಲ್ಲಿ ಪತನಗೊಂಡ ಲಯನ್ ವಿಮಾನ ಪತ್ತೆ: ಇಂಡೋನೇಶಿಯಾ ಮಿಲಿಟರಿ ಮುಖ್ಯಸ್ಥ
ಎರಡು ದಿನಗಳ ಹಿಂದೆ ಸಮುದ್ರದಲ್ಲಿ ಪತನಗೊಂಡು 189 ಮಂದಿ ಪ್ರಯಾಣಿಕರು ಮೃತಪಟ್ಟಿದ್ದ ಇಂಡೋನೇಶ್ಯದ ಲಯನ್ ಜೆಟ್ ವಿಮಾನ ಬಿದ್ದಿರುವ ನಿರ್ದಿಷ್ಟ ತಾಣ ಮತ್ತು ..

Published On :
ಜಕಾರ್ತ: ಎರಡು ದಿನಗಳ ಹಿಂದೆ ಸಮುದ್ರದಲ್ಲಿ ಪತನಗೊಂಡು 189 ಮಂದಿ ಪ್ರಯಾಣಿಕರು ಮೃತಪಟ್ಟಿದ್ದ ಇಂಡೋನೇಶ್ಯದ ಲಯನ್ ಜೆಟ್ ವಿಮಾನ ಬಿದ್ದಿರುವ ನಿರ್ದಿಷ್ಟ ತಾಣ ಮತ್ತು ಧ್ವಂಸಗೊಂಡಿರುವ ಅದರ ಫ್ಯೂಸ್ ಲೇಜ್ ಪತ್ತೆಯಾಗಿರುವುದಾಗಿ ಇಂಡೋನೇಶ್ಯದ ಮಿಲಿಟರಿ ಮುಖ್ಯಸ್ಥ ಹದಿ ತಜಾಂತೋ ಹೇಳಿದ್ದಾರೆ.
ಬೋಯಿಂಗ್ 737 ಮ್ಯಾಕ್ಸ್ ಪ್ಲೇನ್ ನ ಫ್ಯೂಸ್ ಲೇಜ್ ಅವಶೇಷಗಳು ಬಿದ್ದಿರುವ ತಾಣವನ್ನು ಸೋನಾರ್ ತಾಂತ್ರಿಕತೆಯಿಂದ ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ಬೋಯಿಂಗ್ 737 ವಿಮಾನದ ಜೆಟಿ 610 ಫ್ಯೂಸ್ ಲೇಜ್ ಪತ್ತೆಯಾಗಿರುವ ಬಗ್ಗೆ ನಮಗೆ ವಿಶ್ವಾಸವಿದೆ. ಸಂಜೆ 7 ಗಂಟೆಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂದು ತಿಳಿಸಿದೆ.
ರಕ್ಷಣಾ ಸಿಬ್ಬಂದಿ ಸುಮಾರು 30-40 ಮೀಟರ್ ಆಳದಲ್ಲಿ ವಿಮಾನದ ಅವಶೇಷಗಳ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


