ಜಕಾರ್ತಾ: ಟೇಕ್ ಆಫ್ ಆದ 13 ನಿಮಿಷಗಳ ಬಳಿಕ ನಾಪತ್ತೆಯಾದ ಇಂಡೋನೇಷ್ಯಾ ಲಯನ್ ಏರ್'ಲೈನ್ಸ್ ವಿಮಾನ
ಇಂಡೋನೇಷ್ಯಾದ ರಾಜಧಾನಿ ಜಕಾರ್ತಾ ವಿಮಾನ ನಿಲ್ದಾಣದಿಂದ ಹೊರಟ ಲಯನ್ ಏರ್'ಲೈನ್ಸ್ ಪ್ರಯಾಣಿಕ ವಿಮಾನವೊಂದು 13 ನಿಮಿಷಗಳ ಬಳಿಕ ನಾಪತ್ತೆಯಾಗಿರುವ ಘಟನೆ ಸೋಮವಾರ ನಡೆದಿದೆ...

Published On :
ಜಕಾರ್ತಾ: ಇಂಡೋನೇಷ್ಯಾದ ರಾಜಧಾನಿ ಜಕಾರ್ತಾ ವಿಮಾನ ನಿಲ್ದಾಣದಿಂದ ಹೊರಟ ಲಯನ್ ಏರ್'ಲೈನ್ಸ್ ಪ್ರಯಾಣಿಕ ವಿಮಾನವೊಂದು 13 ನಿಮಿಷಗಳ ಬಳಿಕ ನಾಪತ್ತೆಯಾಗಿರುವ ಘಟನೆ ಸೋಮವಾರ ನಡೆದಿದೆ.
ಈ ಕುರಿತಂತೆ ಏರ್'ನಾವ್ ಇಂಡೋನೇಷ್ಯಾ ವಕ್ತಾರ ಯೊಹನೀಸ್ ಹಪ್ಪಿ ಡೈಗ್ಲಾಸ್ ಅವರು ದೃಢಪಡಿಸಿದ್ದಾರೆ. ಲಯನ್ ಏರ್ ಜೆಟಿ610 ಸಂಪರ್ಕವನ್ನು ಕಡಿದುಕೊಂಡಿರುವುದು ನಿಜ ಎಂದು ಯೊಹನೀಸ್ ಹೇಳಿದ್ದಾರೆ.
ವಿಮಾನ ನಾಪತ್ತೆಯಾಗಿರುವ ಮಾಹಿತಿಯನ್ನು ಈಗಾಗಲೇ ರಕ್ಷಣಾ ಪಡೆಗಳಿಗೆ ರವಾನಿಸಲಾಗಿದೆ. ಇಂದು ಬೆಳಿಗ್ಗೆ 6.33 ಬಳಿಕ ವಿಮಾನ ಸಂಪರ್ಕವನ್ನು ಕಡಿದುಕೊಂಡಿದೆ ಎಂದು ತಿಳಿಸಿದ್ದಾರೆ.
ನಾಪತ್ತೆಯಾಗಿರುವ ವಿಮಾನಕ್ಕಾಗಿ ವಿಮಾನ ಸಚಿವಾಲಯದ ಅಧಿಕಾರಿಗಳು ತೀವ್ರ ಹುಡುಕಾಟ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indonesiaನಾಪತ್ತೆmissingಇಂಡೋನೇಷ್ಯಾJakartaಜಕಾರ್ತಾLion Air passenger planeಲಯನ್ ಏರ್\'ಲೈನ್ಸ್ ಪ್ರಯಾಣಿಕ ವಿಮಾನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


