ಪಾಕಿಸ್ತಾನದ ಹಾಂಗುವಿನಲ್ಲಿ ಸ್ಪೋಟ: 25 ಮಂದಿ ದುರ್ಮರಣ
ಪಾಕಿಸ್ತಾನದ ಖೈಬರ್ ಪಾಕುಂಖ್ವಾ ಪ್ರಾಂತ್ಯದಲ್ಲಿ ಇಂದು ಸಂಭವಿಸಿದ ಸ್ಪೋಟದಲ್ಲಿ ಕನಿಷ್ಠ 25 ಜನರು ದುರ್ಮರಣ ಹೊಂದಿದ್ದು, ಡಜನ್ ಗೂ ಅಧಿಕ ಮಂದಿ ತೀವ್ರ ವಾಗಿ ಗಾಯಗೊಂಡಿದ್ದಾರೆ.

ಹಾಂಗು: ಪಾಕಿಸ್ತಾನದ ಖೈಬರ್ ಪಾಕುಂಖ್ವಾ ಪ್ರಾಂತ್ಯದಲ್ಲಿ ಇಂದು ಸಂಭವಿಸಿದ ಸ್ಪೋಟದಲ್ಲಿ ಕನಿಷ್ಠ 25 ಜನರು ದುರ್ಮರಣ ಹೊಂದಿದ್ದು, ಡಜನ್ ಗೂ ಅಧಿಕ ಮಂದಿ ತೀವ್ರ ವಾಗಿ ಗಾಯಗೊಂಡಿದ್ದಾರೆ.
ಧಾರ್ಮಿಕ ಸೆಮಿನರ್ ನಡೆಯುತ್ತಿದ್ದ ಪ್ರದೇಶದ ಹೊರಗಡೆ ಈ ಸ್ಟೋಟ ಸಂಭವಿಸಿದೆ ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ ಜಿಯೋ ಟಿವಿ ವರದಿ ಮಾಡಿದೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಡೀ ಪ್ರದೇಶ ಭದ್ರತಾ ಪಡೆಗಳಿಂದ ಸುತ್ತುವರೆದಿದ್ದು, ತನಿಖೆ ಆರಂಭವಾಗಿದೆ.
ಪಾಕಿಸ್ತಾನದಲ್ಲಿ ಇಂದು ಸಂಭವಿಸಿರುವ ಎರಡನೇ ಘಟನೆ ಇದಾಗಿದೆ. ಇದಕ್ಕೂ ಮುಂಚೆ ಚೀನಾದ ರಾಯಬಾರಿ ಕಚೇರಿ ಬಳಿ ಹೊರಗಡೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


