ದೀಪಾವಳಿ ಆಚರಣೆ ಟ್ವೀಟ್ ನಲ್ಲಿ ಹಿಂದೂಗಳನ್ನೇ ಮರೆತ ಟ್ರಂಪ್!
ಕಳೆದ ವಾರ ಭಾರತ ಸೇರಿದಂತೆ ವಿಶ್ವಾದ್ಯಂತ ನೆಲೆಸಿರುವ ಭಾರತೀಯ ಸಮುದಾಯ ದೀಪಾವಳಿಯನ್ನು ಸಂಭ್ರಮ ಸಡಗರಗಳಿಂದ ಆಚರಿಸಿದೆ.

Published On :
ವಾಷುಇಂಗ್ಟನ್: ಕಳೆದ ವಾರ ಭಾರತ ಸೇರಿದಂತೆ ವಿಶ್ವಾದ್ಯಂತ ನೆಲೆಸಿರುವ ಭಾರತೀಯ ಸಮುದಾಯ ದೀಪಾವಳಿಯನ್ನು ಸಂಭ್ರಮ ಸಡಗರಗಳಿಂದ ಆಚರಿಸಿದೆ.
ಇದೀಗ ವಾರದ ಬಳಿಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ದೀಪಾವಳಿ ಆಚರಣೆ ನಡೆಸಿದ್ದಾರೆ.ತಾವು ದೀಪಾವಳಿ ಆಚರಿಸಿದ ಫೋಟೋಗಳನ್ನು ಟ್ವೀಟ್ ಮಾಡಿರುವ ಟ್ರಂಪ್ ದೀಪಾವಳಿ ಶುಭಾಶಯ ಕೋರುವಾಗ ಮಾತ್ರ ಹಿಂದೂಗಳನ್ನು ಹೆಸರಿಸದೆ ಎಡವಟ್ಟು ಮಾಡಿಕೊಂಡಿದ್ದಾರೆ.
"ದೀಪಾವಳಿ ಬೌದ್ದರು, ಸಿಖ್ಖರು, ಜೈನರ ಹಬ್ಬ" ಎಂದು ಟ್ರಂಪ್ ಟ್ವೀಟ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಆದರೆ ಇದಾಗಿ ಸ್ವಲ್ಪದರಲ್ಲೇ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲೆಂಬತೆ ಟ್ರಂಪ್ "ಹಿಂದೂಗಳ ದೀಪದ ಹಬ ದೀಪಾವಳಿಯನ್ನು ಶ್ವೇತಭವನದ ರೂಪ್ ನೆಲ್ಟ್ ಹಾಲ್ ನಲ್ಲಿ ಇಂದು ಮಧ್ಯಾಹ್ನ ಆಚರಿಸುವ ಶ್ರೇಷ್ಠ ಗೌರವ ನನಗೆ ಲಭಿಸಿದೆ.ಬಹಳ ವಿಶೇಷ ಜನ ಅವರಾಗಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
HindusಹಿಂದೂಗಳುDonald Trumpಡೊನಾಲ್ಡ್ ಟ್ರಂಪ್Deepavali 2018Donald Trump tweetದೀಪಾವಳಿ 2018ಡೊನಾಲ್ಡ್ ಟ್ರಂಪ್ ಟ್ವೀಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


