ಅಧ್ಯಕ್ಷೀಯ ಚುನಾವಣೆ: ಸತತ ನಾಲ್ಕನೇ ಬಾರಿ ರಷ್ಯಾ ಗದ್ದುಗೆ ಏರಿದ ವ್ಲಾಡಿಮಿರ್ ಪುಟಿನ್
ಭಾನುವಾರ ನಡೆದ ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾಡಿಮಿರ್ ಪುಟಿನ್ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮತ್ತೆ ಆರು ವರ್ಷಗಳ ಕಾಲಕ್ಕೆ ಪುಟಿನ್ ಅಧ್ಯಕ್ಷೀಯ ಹುದ್ದೆ ಭದ್ರವಾಗಿದೆ.

Published On :
ಮಾಸ್ಕೋ: ಭಾನುವಾರ ನಡೆದ ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾಡಿಮಿರ್ ಪುಟಿನ್ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮತ್ತೆ ಆರು ವರ್ಷಗಳ ಕಾಲಕ್ಕೆ ಪುಟಿನ್ ಅಧ್ಯಕ್ಷೀಯ ಹುದ್ದೆ ಭದ್ರವಾಗಿದೆ.
ಸರಿಸುಮಾರು ಎರಡು ದಶಕಗಳಿಂದ ರಷ್ಯಾ ಆಳತ್ತಿರುವ ಪುಟಿನ್ ಅತ್ಯುತ್ತಮ ವಾಗಿ ಚುನಾವಣಾ ಕಾರ್ಯಕ್ಷಮತೆ ತೋರಿದ್ದಾರೆ, ಶೇ. 76 ರಷ್ಟು ಮತದಾನವಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಆದರೆ ವಿರೋಧ ಪಕ್ಷ ಇದನ್ನು ಅನೈತಿಕತೆಯ ಪರಮಾವಧಿ ಎಂದು ದೂರಿದೆ, ಬ್ಯಾಲಟ್ ಪೇಪರ್ ನಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿದೆ,
ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪುಟಿನ್ ಉಳಿದ 7 ಅಭ್ಯರ್ಥಿಗಳನ್ನು ಬದಿಗೊತ್ತಿ ರಷ್ಯಾದ ಸಮರ್ಥ ನಾಯಕರಾಗಿದ್ದಾರೆ. ಅವರ ಸಾಂಪ್ರಾದಾಯಿಕ ವಿಮರ್ಶಕ ಅಲೆಕ್ಸಿ ನಾವ್ಲಾನಿ ಅವರು ಬ್ಯಾಲಟ್ ಅನ್ನು ಕಾನೂನಾತ್ಮಕ ಕಾರಣಗಳಿಗಾಗಿ ತಡೆ ಹಿಡಿಯಲಾಗಿದೆ,
ಈ ಫಲಿತಾಂಶ ಬರುತ್ತದೆ ಎಂಬ ಆತ್ಮ ವಿಶ್ವಾಸ ನನಗಿತ್ತು ಎಂದು ಪುಟಿನ್ ಹೇಳಿದ್ದಾರೆ,. ಫಲಿತಾಂಶ ಪ್ರಕಟಗೊಂಡ ನಂತರ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ದೇಶದ ಮಕ್ಕಳ ಮುಂದಿನ ಭವಿಷ್ಯದ ಪರವಾಗಿ ನಮ್ಮ ಆಲೋಚನೆಗಳಿರುತ್ತವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


