ವಿದೇಶ

ಚರ್ಚೆಯೇ ಇಲ್ಲದೆ ಚೀನಾ ವಸ್ತುಗಳ ತೆರಿಗೆ ಕಡಿತ ಮಾಡಿದ ಅಮೆರಿಕ ಸಂಸತ್ತು!

ಚೀನಾ ಮತ್ತು ಅಮೆರಿಕ ನಡುವಿನ ವಾಣಿಜ್ಯ ತೆರಿಗೆ ತಿಕ್ಕಾಟ ತಾರಕಕ್ಕೇರಿರುವಂತೆಯೇ ತನ್ನ ಹಠಮಾರಿ ಧೋರಣೆಯನ್ನು ಸಡಿಲಗೊಳಿಸಿರುವ ಅಮೆರಿಕ ಚೀನಾ ವಸ್ತುಗಳೂ ಸೇರಿದಂತೆ ವಿದೇಶಿ ವಸ್ತುಗಳ ಮೇಲಿನ ತೆರಿಗೆ ಕಡಿತಗೊಳಿಸಿದೆ ಎಂದು ತಿಳಿದುಬಂದಿದೆ.

ಚರ್ಚೆಯೇ ಇಲ್ಲದೆ ಚೀನಾ ವಸ್ತುಗಳ ತೆರಿಗೆ ಕಡಿತ ಮಾಡಿದ ಅಮೆರಿಕ ಸಂಸತ್ತು!
ಸಂಗ್ರಹ ಚಿತ್ರ
Published On :
ವಾಷಿಂಗ್ಟನ್: ಚೀನಾ ಮತ್ತು ಅಮೆರಿಕ ನಡುವಿನ ವಾಣಿಜ್ಯ ತೆರಿಗೆ ತಿಕ್ಕಾಟ ತಾರಕಕ್ಕೇರಿರುವಂತೆಯೇ ತನ್ನ ಹಠಮಾರಿ ಧೋರಣೆಯನ್ನು ಸಡಿಲಗೊಳಿಸಿರುವ ಅಮೆರಿಕ ಚೀನಾ ವಸ್ತುಗಳೂ ಸೇರಿದಂತೆ ವಿದೇಶಿ ವಸ್ತುಗಳ ಮೇಲಿನ ತೆರಿಗೆ ಕಡಿತಗೊಳಿಸಿದೆ ಎಂದು ತಿಳಿದುಬಂದಿದೆ.
ನಿನ್ನೆ ಅಮೆರಿಕ ಸಂಸತ್ತಿನಲ್ಲಿ ನಡೆದ ಕಲಾಪದ ವೇಳೆ ವಿದೇಶಿ ವಸ್ತುಗಳ ಮೇಲಿನ ತೆರಿಗೆ ಕಡಿತಗೊಳಿಸುವ ಮಸೂದೆಗೆ ಅವಿರೋಧವಾಗಿ ಅನುಮೋದನೆ ನೀಡಲಾಯಿತು. ಈ ಹೊಸ ಮಸೂದೆಯ ಅನ್ವಯ ಟೋಸ್ಟರ್, ಕೆಮಿಕಲ್ಸ್ ಗಳೊಂದಿಗೆ ಚೀನಾ ವಸ್ತುಗಳೂ ಸೇರಿದಂತೆ ಸುಮಾರು 1,660 ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಮುಖ ಅಂಶವೆಂದರೆ ಈ ವಸ್ತುಗಳ ಮೇಲಿನ ತೆರಿಗೆ ಕಡಿತ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಸಂಸತ್ತಿನಲ್ಲಿ ಯಾವುದೇ ರೀತಿಯ ಚರ್ಚೆ ಇಲ್ಲದೇ ಅವಿರೋಧವಾಗಿ ನಿರ್ಣಯ ಕೈಗೊಳ್ಳಲಾಗಿದೆ. 
ಇನ್ನು ಪ್ರಸ್ತುತ ತೆರಿಗೆ ಕಡಿತವಾಗಿರುವ 1,660 ವಸ್ತುಗಳ ಪೈಕಿ ಸುಮಾರು ಶೇ.50ಕ್ಕೂ ಅಧಿಕ ವಸ್ತುಗಳು ಚೀನಾ ದೇಶದ ವಸ್ತುಗಳಾಗಿವೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕ ವಸ್ತುಗಳ ಮೇಲೆ ಚೀನಾ ದೇಶ ಹೆಚ್ಚುವರಿ ಅಥವಾ ದುಬಾರಿ ತೆರಿಗೆ ಹೇರಿರುವುದನ್ನು ಖಂಡಿಸಿದ್ದರು. ಅಲ್ಲದೆ ಇದಕ್ಕೆ ತಿರುಗೇಟು ಎಂಬಂತೆ ತಮ್ಮ ಸರ್ಕಾರದಿಂದಲೂ ಚೀನಾ ಸೇರಿದಂತೆ ವಿವಿಧ ದೇಶಗಳ ವಸ್ತುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದರು.
ತಾರಕಕ್ಕೇರಿದ ಚೀನಾ-ಅಮೆರಿಕ ವಾಣಿಜ್ಯ ತಿಕ್ಕಾಟ ಹಿನ್ನಲೆಯಲ್ಲಿ ಸಂಧಾನದ ಕ್ರಮ ಎಂದು ತಜ್ಞರ ಬಣ್ಣನೆ
ಇನ್ನು ಅಮೆರಿಕ ಸಂಸತ್ತಿನ ನಡೆಯನ್ನು ಸಂಧಾನದ ಕ್ರಮ ಎಂದು ಅಮೆರಿಕ ರಾಜಕೀಯ ತಜ್ಞರು ಬಣ್ಣಿಸಿದ್ದು, ಮೊದಲ ಹೆಜ್ಜೆಯಾಗಿ ಅಮೆರಿಕ ತನ್ನ ತೆರಿಗೆಯನ್ನು ಕಡಿತಗೊಳಿಸಿದೆ. ಈಗ ಇತರೆ ದೇಶಗಳೂ ಕೂಡ ತೆರಿಗೆ ಪ್ರಮಾಣವನ್ನು ಕಡಿತಗೊಳಿಸಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.