ಭಾರತ-ಅಮೆರಿಕಾ ಸಂಬಂಧಕ್ಕೆ ಆಕಾಶವೇ ಎಲ್ಲೆ: ನಿಕ್ಕಿ ಹ್ಯಾಲಿ
ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದೊಂದಿಗೆ ತಮ್ಮ ದೇಶದ ಸಂಬಂಧ ದಿನ ದಿನಕ್ಕೆ ಉತ್ತಮಗೊಳ್ಳುತ್ತಿರುವುದರ ಬಗೆಗೆ ಸಂತಸ ವ್ಯಕ್ತಪಡಿಸಿದ್ದು.......

Published On :
ವಾಷಿಂಗ್ ಟನ್: ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದೊಂದಿಗೆ ತಮ್ಮ ದೇಶದ ಸಂಬಂಧ ದಿನ ದಿನಕ್ಕೆ ಉತ್ತಮಗೊಳ್ಳುತ್ತಿರುವುದರ ಬಗೆಗೆ ಸಂತಸ ವ್ಯಕ್ತಪಡಿಸಿದ್ದು ಅಮೆರಿಕಾದ ಉನ್ನತ ರಾಜತಾಂತ್ರಿಕರು ಈ ಎರಡು ರಾಷ್ಟ್ರಗಳ ಸಂಬಂಧಕ್ಕೆ 'ಆಕಾಶವೇ ಎಲ್ಲೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಸಂಸ್ಥೆಯ ಅಮೆರಿಕಾ ರಾಯಭಾರಿ, ನಿಕ್ಕಿ ಹ್ಯಾಲೆ ಆರ್ಥಿಕ ಮತ್ತು ಆಡಳಿತ ಸುಧಾರಣೆಗಳನ್ನು ಮುಂದುವರಿಸುವಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯತಂತ್ರಗಳನ್ನು ಹೊಗಳಿದ್ದಾರೆ. ಉನ್ನತ ಸಾಧನೆ ಮಾಡಿದ ಭಾರತೀಯ-ಅಮೆರಿಕನ್ನರನ್ನು ಉದ್ದೇಶಿಸಿ ಟ್ರಂಪ್ ಆಡಳಿತ ಸಹ ಇದನ್ನೇ ಬಯಸಿದೆ ಎಂದು ಅವರು ಹೇಳಿದ್ದಾರೆ. ಅಮೆರಿಕದ ಭಾರತೀಯ ರಾಯಭಾರಿ ನವತೇಜ್ ಸಿಂಗ್ ಸಾರ್ನಾ ಅವರ ನಿವಾಸದಲ್ಲಿ ಮಂಗಳವಾರ ಏರ್ಪಡಿಸಲಾದ ಭೋಜನಕೂಟದ ಸಭೆಯಲ್ಲಿ ಮಾತನಾಡುತ್ತಾ ಹ್ಯಾಲೆ ಈ ಮಾತು ಹೇಳಿದ್ದಾರೆ.
"ಭಾರತೀಯ ಬೇರುಗಳಲ್ಲಿ ಹೊಂದಿರುವ ಹೆಮ್ಮೆಯ ಅರ್ಥವನ್ನು ಕಾಣಲು ನಾನು ಯಾವಾಗಲೂ ಸಂತಸಪಡುತ್ತೇನೆ. ಅಮೆರಿಕಾದಲ್ಲಿನ ರಾಜಕೀಯರು ವಿವಿಧ ಕ್ಷೇತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವುದು ಸಹ ಭಾರತ-ಅಮೆರಿಕ ಸಂಬಂಧಕ್ಕೆ ಹೆಚ್ಚಿನ ಗಟ್ಟಿತನವನ್ನು ಕೊಟ್ಟಿದೆ".ಸರ್ನಾ ಹೇಳಿದರು.
ಟ್ರಂಪ್ ಆಡಳಿತಕ್ಕೆ ಸೇರಿದಾಗ, ಅಮೆರಿಕಾ-ಭಾರತದ ಸಂಬಂಧಗಳು ಬಲವಾಗಿದೆ ಎಂದು ತಿಳಿಯುವುದಕ್ಕೆ ಬಯಸಿದ್ದೆ ಎಂದು ಹ್ಯಾಲೆ ಹೇಳಿದ್ದಾರೆ. "ಮೌಲ್ಯಗಳ ವಿಚಾರಕ್ಕೆ ಬಂದಾಗ ನಾವಿಬ್ಬರೂ ಒಂದೇ ಬಗೆಯಾಗಿದ್ದೇವೆ. ಆದರೆ ನೀವು ಮೌಲ್ಯಗಳೆಂದರೆ ಕಾರ್ಮಿಕರ ದೃಷ್ಟಿಯಿಂದ ನೊಡುದರೆ ನಾವು ಕಾರ್ಪೋರೇಟ್ ದೃಷ್ಟಿಯಿಂದ ನೋಡುತ್ತೇವೆ. ಸಂಶೋಧನೆ ಹ್ಹಾಗೂ ಇತರೆ ವಿಚಾರಗಳನ್ನು ನೋಡಿದಾಗಳು ಎರದೂ ಪ್ರಜಾಪ್ರಭುತ್ವಗಳು ಒಂದೇ ರೀತಿಯಲ್ಲಿ ಆಲೋಚಿಸುತ್ತಿರುವುದು ಕಾಣುತ್ತದೆ
"ಬೆಳೆಯುತ್ತಿರುವ ಸಂಬಂಧ ಉತ್ತಮವಾಗಿರುವುದನ್ನು ನಾವು ಇಂದು ಕಾಣುತ್ತಿದ್ದೇವೆ. ಭಾರತದೊಡನೆ ಬೆಳೆಯುತ್ತಿರುವ ಎಂಬುದರ ಬಗ್ಗೆ ಅಧ್ಯಕ್ಷರು ಬಹಳ ಸಂತಸಗೊಂಡಿದ್ದಾರೆ, ಭಾರತದೊಡನೆ ಇನ್ನಷ್ಟು ಗಟ್ಟಿಯಾದ ಸಂಬಂಧ ಹೊಂದುತ್ತೇವೆ ಎನ್ನುವುದನ್ನು ಆವು ಖಚಿತಪಡಿಸಲು ಇಚ್ಚಿಸುತ್ತೇವೆ." ಹ್ಯಾಲೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿindiaಭಾರತಅಮೆರಿಕಾUnited StatesDonald Trumpಡೊನಾಲ್ಡ್ ಟ್ರಂಪ್Nikki Haleyನಿಕ್ಕಿ ಹ್ಯಾಲೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


