ಉತ್ತರ ಕೊರಿಯಾ ಉಡಾಯಿಸಿದ್ದ ಕ್ಷಿಪಣಿ ತನ್ನದೇ ನಗರಕ್ಕೆ ಬಡಿದಿತ್ತು: ವರದಿ
ಸದಾಕಾಲ ಯುದ್ಧೋತ್ಸಾಹದ ಹೇಳಿಕೆ ನೀಡುತ್ತಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ವಿಶ್ವದ ದೊಡ್ಡಣ ಎಂದು ಕರೆಸಿಕೊಳ್ಳುವ ಅಮೆರಿಕ...

Published On :
ಲಂಡನ್: ಸದಾಕಾಲ ಯುದ್ಧೋತ್ಸಾಹದ ಹೇಳಿಕೆ ನೀಡುತ್ತಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ವಿಶ್ವದ ದೊಡ್ಡಣ ಎಂದು ಕರೆಸಿಕೊಳ್ಳುವ ಅಮೆರಿಕ ವಿರುದ್ಧವೇ ತೊಡೆ ತಟ್ಟಿ ನಿಂತಿದ್ದಾನೆ. ಆದರೆ ಈ ಹಿಂದೆ ಉತ್ತರ ಕೊರಿಯಾ ಉಡಾಯಿಸಿದ್ದ ಕ್ಷಿಪಣಿಯೊಂದು ನಿರ್ದಿಷ್ಟ ಗುರಿ ತಲುಪುವಲ್ಲಿ ವಿಫಲವಾಗಿ ತನ್ನದೇ ನಗರದ ಮೇಲೆ ಬಿದ್ದಿತ್ತು ಎಂಬ ವರದಿಯೊಂದು ಬಹಿರಂಗಗೊಂಡಿದೆ.
ಕಳೆದ ವರ್ಷ ಏಪ್ರಿಲ್ 28ರಂದು ಹ್ವಾಸಂಗ್ 12 ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಆದರೆ ಈ ಪರೀಕ್ಷೆ ವಿಫಲವಾಗಿದ್ದು ಕ್ಷಿಪಣಿ ಟೋಕ್ಚನ್ ನಗರದ ಮೇಲೆ ಬಿದ್ದಿತ್ತು. ಸುಮಾರು ಎರಡು ಲಕ್ಷ ಜನಸಂಖ್ಯೆ ಇರುವ ಟೋಕ್ಚನ್ ನಗರದಲ್ಲಿದ್ದನ ಕೃಷಿ ಕಟ್ಟಡಗಳ ಮೇಲೆ ಕ್ಷಿಪಣಿ ಬಿದ್ದಿದ್ದು ಇದರಿಂದ ಕಟ್ಟದ ಗಂಭೀರವಾಗಿ ಹಾನಿಗೊಂಡಿದೆ ಎಂಬುದನ್ನು ಉಪಗ್ರಹ ಚಿತ್ರಣದೊಂದಿಗೆ ಅಮೆರಿಕ ಗುಪ್ತಚರ ಮೂಲಗಳು ಉದಾಹರಿಸಿತ್ತು ಎಂದು ಡಿಪ್ಲೋಮ್ಯಾಟ್ ಪತ್ರಿಕೆಯೊಂದು ವರದಿ ಮಾಡಿದೆ.
ಪುಕ್ಚಂಗ್ ವಿಮಾನ ನಿಲ್ದಾಣದಿಂದ ಈ ಕ್ಷಿಪಣಿಯನ್ನು ಉಡಾಯಿಸಲಾಗಿತ್ತು. ಉಡಾವಣೆಗೊಂಡ ನಂತರ 24 ಮೈಲು ದೂರ ಕ್ರಮಿಸುವುದರೊಳಗಾಗಿ ಕ್ಷಿಪಣಿಯ ಮೊದಲ ಹಂತದಲ್ಲಿನ ಇಂಜಿನ್ ಗಳು ವಿಫಲವಾಗಿ ಕ್ಷಿಪಣಿ ಪತನಗೊಂಡಿತ್ತು.
ಅಮೆರಿಕ ತನ್ನ ಮೇಲೆ ದಾಳಿ ಮಾಡಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಹೇಳಿ ಅದರ ಬೆನ್ನಲ್ಲೇ ತನ್ನಲ್ಲಿರುವ ಅತ್ಯಾಧುನಿಕ ಕ್ಷಿಪಣಿಗಳ ಪರೇಡ್ ನಡೆಸುವ ಮೂಲಕ ವಿಶ್ವ ಸಮುದಾಯಕ್ಕೆ ಟಾಂಗ್ ನೀಡಿದ್ದ ಉತ್ತರ ಕೊರಿಯಾ, ಇದರ ಬೆನ್ನಲ್ಲೇ ಖಂಡಾಂತರ ಕ್ಷಿಪಣಿಯ ಪರೀಕ್ಷೆಗೆ ಮುಂದಾಗಿತ್ತು. ಆದರೆ ಕ್ಷಿಪಣಿ ಪರೀಕ್ಷೆ ವಿಫಲವಾಗಿದ್ದು, ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಗೆ ಮುಖಭಂಗವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


