ಮಾಲ್ಡೀವ್ಸ್ ಬಿಕ್ಕಟ್ಟು: ಪ್ರಧಾನಿ ಮೋದಿ, ಅಮೆರಿಕಾ ಅಧ್ಯಕ್ಷ ಟ್ರಂಪ್ ದೂರವಾಣಿ ಸಂಭಾಷಣೆ
ಮಾಲ್ಡೀವ್ಸ್ ಬಿಕ್ಕಟ್ಟು ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಗುರುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರವಾಣಿ ಮುಖಾಂತರ ಮಾತುಕತೆ ನಡೆಸಿದ್ದಾರೆ.

Published On :
ವಾಷಿಂಗ್ ಟನ್: ಮಾಲ್ಡೀವ್ಸ್ ಬಿಕ್ಕಟ್ಟು ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಗುರುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರವಾಣಿ ಮುಖಾಂತರ ಮಾತುಕತೆ ನಡೆಸಿದ್ದಾರೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸುರಕ್ಷತೆ ಮತ್ತು ಅಭಿವೃದ್ದಿ ಹೆಚ್ಚಳಕ್ಕಾಗಿ ಒತ್ಟಾಗಿ ಕೆಲಸ ಮಾಡುವ ವಾಗ್ದಾನ ಮಾಡಿದರು.
"ಇಬ್ಬರೂ ಮುಖಂಡರು ಮಾಲ್ಡೀವ್ಸ್ ನಲ್ಲಿನ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಗೌರವದ ಪ್ರಾಮುಖ್ಯತೆ ಮತ್ತು ಕಾನೂನಿನ ಸೂಕ್ತ ನಿಯಂತ್ರಣದ ಬಗೆಗೆ ಕಳವಳವನ್ನು ವ್ಯಕ್ತಪಡಿಸಿದರು." ಟ್ರಂಪ್ ಹಾಗೂ ಮೋದಿ ದೂರವಾಣಿ ಸಂಬಾಷಣೆಯ ಕುರಿತಂತೆ ವೈಟ್ ಹೌಸ್ ಹೇಳಿಕೆ ನೀಡಿದೆ. ಇದು ಈ ವರ್ಷದ ಟ್ರಂಪ್ ಹಾಗೂ ಮೋದಿ ನಡುವಿನ ಪ್ರಥಮ ದೂರವಾಣಿ ಸಂಬಾಷಣೆಯಾಗಿದೆ.
ಅಧ್ಯಕ್ಷ ಟ್ರಂಪ್ ಅವರ ದಕ್ಷಿಣ ಏಷ್ಯಾ ಕಾರ್ಯತಂತ್ರವನ್ನು ದೃಢೀಕರಿಸಿದ ವೈಟ್ ಹೌಸ್, ಅಫ್ಘಾನಿಸ್ತಾನದ ಭದ್ರತೆ ಮತ್ತು ಸ್ಥಿರತೆಗೆ ಬೆಂಬಲ ನೀಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು ಮಯನ್ಮಾರ್ ಮತ್ತು ರೊಹಿಂಗ್ಯಾ ನಿರಾಶ್ರಿತರ ಸಮಸ್ಯೆ ಬಗೆಹರಿಸುವ ಮಾರ್ಗಗಳ ಕುರಿತಂತೆಯೂ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.
ಕಳೆದ ಗುರುವಾರದಿಂದ ರಾಜಕೀಯ ಅಸ್ತವ್ಯಸ್ತತೆಗೆ ಒಳಗಾಗಿರುವ ದ್ವೀಪರಾಷ್ಟ್ರ ಮಾಲ್ಡೀವ್ಸ್ ನ ಸುಪ್ರೀಂ ಕೋರ್ಟ್ ಒಂಭತ್ತು ಮಂದಿ ವಿರೋಧ ಪಕ್ಷದ ನಾಯಕರನ್ನು ಜೈಲಿನಿಂದ ಬಿಡುಗಡೆ ಮಾಡಲು ಆದೇಶಿಸಿತ್ತು. ಸರ್ಕಾರದ ನಡೆ 'ರಾಜಕೀಯ ಪ್ರೇರಿತ' ಹಾಗೂ ದೋಷಪೂರಿತವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಆದರೆ ಯಮೀನ್ ಸರ್ಕಾರವು ನ್ಯಾಯಾಲಯ ಆದೇಶವನ್ನು ಜಾರಿಗೊಳಿಸಲು ನಿರಾಕರಿಸಿದ್ದು, ಮಾಲ್ಡೀವ್ಸ್ ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಪ್ರಾರಂಭವಾಗಿದ್ದವು.
ಇಮೀನ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಕೆಲವೇ ಗಂಟೆಗಳಲ್ಲಿ ದ್ವೀಪರಾಷ್ಟ್ರದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅಬ್ದುಲ್ಲಾ ಸಯೀದ್ ಮತ್ತು ಇನ್ನೊಬ್ಬ ನ್ಯಾಯಾಧೀಶ ಅಲಿ ಹಮೀದ್ ಅವರನ್ನು ಬಂಧಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿMyanmarಮಯನ್ಮಾರ್AfghanistanMaldivesಮಾಲ್ಡೀವ್ಸ್ಅಫ್ಘಾನಿಸ್ತಾನDonald Trumpಡೊನಾಲ್ಡ್ ಟ್ರಂಪ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


