ವಿದೇಶ

ಬ್ರಿಟನ್ ನಲ್ಲಿ ಆಸ್ತಿ ಹೊಂದಿರುವ ದಾವೂದ್, ಭಾರತದ ದಾಖಲೆಗಳನ್ನಾಧರಿಸಿ ನಡೆಸಿದ ತನಿಖೆಯಲ್ಲಿ ಬಹಿರಂಗ

ಭಾರತದ ಪಾಲಿನ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬ್ರಿಟನ್ ನ ನಾನಾ ಭಾಗಗಳಲ್ಲಿ ಆಸ್ತಿಗಳನ್ನು ಹೊಂದಿದ್ದಾನೆ ಎಂದು ಲಂಡನ್ ನ ಪತ್ರಿಕೆಯೊಂದು ವರದಿ ಮಾಡಿದೆ.

ಬ್ರಿಟನ್ ನಲ್ಲಿ ಆಸ್ತಿ ಹೊಂದಿರುವ ದಾವೂದ್, ಭಾರತದ ದಾಖಲೆಗಳನ್ನಾಧರಿಸಿ ನಡೆಸಿದ ತನಿಖೆಯಲ್ಲಿ ಬಹಿರಂಗ
ದಾವೂದ್ ಇಬ್ರಾಹಿಂ
Published On :
ಲಂಡನ್: ಭಾರತದ ಪಾಲಿನ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬ್ರಿಟನ್ ನ ನಾನಾ ಭಾಗಗಳಲ್ಲಿ ಆಸ್ತಿಗಳನ್ನು ಹೊಂದಿದ್ದಾನೆ ಎಂದು ಲಂಡನ್ ನ ಪತ್ರಿಕೆಯೊಂದು ವರದಿ ಮಾಡಿದೆ.
ಲಂಡನ್ನಿನ "ದ ಟೈಮ್ಸ್‌' ಪತ್ರಿಕೆ ಈ ವರದಿಯನ್ನು ಪ್ರಕಟಿಸಿದ್ದು ಬ್ರಿಟನ್ ನಲ್ಲಿ ದಾವೂದ್ ಆಸ್ತಿ ಹೊಂದಿದ್ದಾನೆ ಎನ್ನುವ ಬಗೆಗೆ ಭಾರತ ಸರ್ಕಾರ ನೀಡಿದ್ದ ಮಾಹಿತಿ ಆಧಾರದಲ್ಲಿ ಪತ್ರಿಕೆ ಈ ತನಿಖಾ ವರದಿ ಪ್ರಕಟಿಸಿದೆ. ವರದಿಯಲ್ಲಿ ಆಸ್ತಿಗಳಿಗೂ ಪಾತಕಿ ದವೂದ್ ಗೆ ಸಹ ನಿಕಟ ಸಂಪರ್ಕವಿದೆ ಎಂದು ಹೇಳಿದೆ.
ದಾವೂದ್ ನ ಬಲಗೈ ಬಂಟ ಮಹಮೂದ್‌ ಇಕ್ಬಾಲ್‌ ಮಿರ್ಚಿ ಮೆಮನ್‌ ಈ ಆಸ್ತಿಗಳ ಉಸ್ತುವಾರಿ ನೋಡುತ್ತಿದ್ದಾನೆ. ಡಿ ಕಂಪನಿಯ 11 ನಿರ್ದೇಶಕರಲ್ಲಿ ಒಬ್ಬನಾಗಿರುವ ಈತ ದಾವೂದ್ ಗೆ ಸಂಬಂಧಿಸಿದ ಬ್ರಿಟನ್ ಆಸ್ತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾನೆ. ಮೆಮನ್‌ 1993ರ ಮುಂಬೈ ಸರಣಿ ಸ್ಪೋಟ ಪ್ರಕರಣದಲ್ಲಿ  ಕೂಡಾ ಭಾಗಿಯಾಗಿದ್ದ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಬ್ರಿಟನ್ ನಲ್ಲಿ ದಾವೂದ್ ಗೆ ಸೇರಿದ ಹೋಟೆಲ್, ಐಷಾರಾಮಿ ಬಂಗಲೆಗಳು, ವಾಣಿಜ್ಯ ಕಟ್ಟಡಗಳಿದೆ ಎಂದು ವರದಿಯಾಗಿದೆ. 
ಈ ಹಿಂದೆ ಭಾರತವು ಬ್ರಿಟನ್ ನ ಕಂಪನೀಸ್‌ ಹೌಸ್‌ ಮತ್ತು ಲ್ಯಾಂಡ್‌ ರಿಜಿಸ್ಟ್ರಿಗೆ ದಾವೂದ್ ಇಬ್ರಾಹಿಂ ಒಡೆತನದ ಆಸ್ತಿ ವಿವರಗಳ ಪಟ್ಟಿಯನ್ನು ನೀಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.