ಕಾಂಬೊಡಿಯಾ ವಿದೇಶಾಂಗ ಸಚಿವರೊಂದಿಗೆ ಸುಷ್ಮಾ ಸ್ವರಾಜ್ ದ್ವಿಪಕ್ಷೀಯ ಮಾತುಕತೆ
ಕಾಂಬೊಡಿಯಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹವರ್ತಿ ಪ್ರಕ್ ಸೊಕೊನ್ ಅವರೊಂದಿಗೆ ದ್ವೀಪಕ್ಷೀಯ ಬಾಂಧವ್ಯ ವೃದ್ದಿ ಕುರಿತಂತೆ ಮಾತುಕತೆ ನಡೆಸಿದರು.

ನೋಮ್ ಪೆನ್ : ಕಾಂಬೊಡಿಯಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹವರ್ತಿ ಸಚಿವ ಪ್ರಕ್ ಸೊಕೊನ್ ಅವರೊಂದಿಗೆ ದ್ವೀಪಕ್ಷೀಯ ಬಾಂಧವ್ಯ ವೃದ್ದಿ ಕುರಿತಂತೆ ಮಾತುಕತೆ ನಡೆಸಿದರು.
ಎರಡು ದಿನಗಳ ಕಾಲ ಆಗ್ನೇಯ ಏಷ್ಯಾ ರಾಷ್ಟ್ರಗಳ ಭೇಟಿಯಲ್ಲಿರುವ ಸುಷ್ಮಾ ಸ್ವರಾಜ್, ಕಾಂಬೊಡಿಯಾ ಪ್ರಧಾನಮಂತ್ರಿ ಹುನ್ ಸೇನ್ ಹಾಗೂ ಅಧ್ಯಕ್ಷ ಸೆನೆಟ್ ಸೆ ಚ್ಯೂಟ್ ಅವರೊಂದಿಗೂ ಮಾತುಕತೆ ನಡೆಸಲಿದ್ದಾರೆ.
ವಿಯಟ್ನಾಂ ರಾಜಧಾನಿ ಹನೊಯ್ ನಲ್ಲಿ ಸುಷ್ಮಾ ಸ್ವರಾಜ್ ಅಧ್ಯಕ್ಷತೆಯಲ್ಲಿ ನಡೆದ 16 ನೇ ಜಂಟಿ ಆಯೋಗದಲ್ಲಿ ಭಾರತ ಮತ್ತು ವಿಯಟ್ನಾಂ ನಡುವಣ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ದ್ವೀಪಕ್ಷೀಯ ಬಾಂಧವ್ಯ ವೃದ್ದಿ ಹಿನ್ನೆಲೆಯಲ್ಲಿ ಬಾಂಗ್ಲಾದೇಶ, ಜಪಾನ್, ಮತ್ತು ಶ್ರೀಲಂಕಾ ಸೇರಿದಂತೆ ಹಲವು ರಾಷ್ಟ್ರಗಳ ನಿಯೋಗವನ್ನು ಸುಷ್ಮಾ ಸ್ವರಾಜ್ ಭೇಟಿ ಮಾಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


