'ಎ ನ್ಯೂ ಹಿಸ್ಟರಿ ಬಿಗಿನ್ಸ್'; ದ.ಕೊರಿಯಾದಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಐತಿಹಾಸಿಕ ಮಾತುಕತೆ
ಇದೇ ಮೊದಲ ಬಾರಿಗೆ ಉತ್ತರ ಕೊರಿಯಾ ಅಧ್ಯಕ್ಷ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾಗೆ ಭೇಟಿ ನೀಡಿದ್ದು, ಐತಿಹಾಸಿಕ ದ್ವಿಪಕ್ಷೀಯ ಮಾತುಕತೆಗೆ ಚಾಲನೆ ನೀಡಿದ್ದಾರೆ.

Published On :
ಸಿಯೋಲ್: ಇದೇ ಮೊದಲ ಬಾರಿಗೆ ಉತ್ತರ ಕೊರಿಯಾ ಅಧ್ಯಕ್ಷ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾಗೆ ಭೇಟಿ ನೀಡಿದ್ದು, ಐತಿಹಾಸಿಕ ದ್ವಿಪಕ್ಷೀಯ ಮಾತುಕತೆಗೆ ಚಾಲನೆ ನೀಡಿದ್ದಾರೆ.
ಈ ಹಿಂದೆ ಅಮೆರಿಕ ದ್ವಿಪಕ್ಷೀಯ ಮಾತುಕತೆಗೆ ಮುಂದಾದರೆ ತನ್ನ ಅಣ್ವಸ್ತ್ರ ಯೋಜನೆ ಕೈಬಿಡುವ ಕುರಿತು ಆಲೋಚನೆ ಮಾಡುವುದಾಗಿ ಹೇಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿದ್ದ ಕಿಮ್ ಜಾಂಗ್ ಉನ್ ಇದೇ ಮೊದಲ ಬಾರಿಗೆ ತನ್ನ ವೈಷಮ್ಯ ಮರೆತು ದಕ್ಷಿಣ ಕೊರಿಯಾ ನೆಲದ ಮೇಲೆ ಕಾಲಿರಿಸಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ರ ದಕ್ಷಿಣ ಕೊರಿಯಾ ಭೇಟಿ ಕೊನೆಗೂ ಆರಂಭವಾಗಿದ್ದು, ವಿವಾದಿತ ದಕ್ಷಿಣ ಭಾಗದ ಗಡಿಯನ್ನು ದಾಟಿ ಉನ್ ದಕ್ಷಿಣ ಕೊರಿಯಾಗೆ ಭೇಟಿ ನೀಡಿದ್ದಾರೆ. 1950-53ರ ಕೊರಿಯಾ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಉತ್ತರ ಕೊರಿಯಾ ಅಧ್ಯಕ್ಷರೊಬ್ಬರು ದಕ್ಷಿಣ ಕೊರಿಯಾಗೆ ಬೇಟಿ ನೀಡಿದ್ದು, ಐತಿಹಾಸಿಕ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
'ಎ ನ್ಯೂ ಹಿಸ್ಟರಿ ಬಿಗಿನ್ಸ್'
ಕಿಮ್ ಜಾಂಗ್ ಉನ್ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ–ಇನ್ ಅವರು ಉಭಯ ದೇಶಗಳ ಮಿಲಿಟರಿ ನಿಷೇಧಿತ ಗಡಿ ಪ್ರದೇಶದಲ್ಲಿ ಭೇಟಿಯಾಗಿದ್ದು, ಈ ವೇಳೆ ನೋಂದಣಿ ಪುಸ್ತರದಲ್ಲಿ ಸಹಿ ಹಾಕಿರುವ ಕಿಮ್ ಜಾಂಗ್ ಉನ್, ಹೊಸ ಇತಿಹಾಸ ಆರಂಭವಾಗಿದೆ ('ಎ ನ್ಯೂ ಹಿಸ್ಟರಿ ಬಿಗಿನ್ಸ್') ಎಂದು ಬರೆದಿದ್ದಾರೆ.
ಪನ್ಮುಂಜೊಮ್ ನಲ್ಲಿ ಐತಿಹಾಸಿಕ ಅಂತರ ಕೊರಿಯಾ ಶೃಂಗಸಭೆಯಲ್ಲಿ ಇಬ್ಬರು ನಾಯಕರು ಮಾತುಕತೆ ನಡೆಸಲಿದ್ದಾರೆ. ಕೊರಿಯಾ ಶೃಂಗಸಭೆ ನಡೆಯುವ ‘ಪೀಸ್ ಹೌಸ್‘ ಪ್ರವೇಶಿಸಿದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರು ‘ಒಂದು ಹೊಸ ಇತಿಹಾಸ ಪ್ರಾರಂಭವಾಗುತ್ತದೆ’ ಮತ್ತು ‘ಶಾಂತಿ ಮರು ಸ್ಥಾಪನೆಗೆ ಐತಿಹಾಸಿಕ ಮುನ್ನುಡಿ’ ಎಂದು ಅತಿಥಿ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
South Koreaದಕ್ಷಿಣ ಕೊರಿಯಾKim Jong UnNorth Koreaಉತ್ತರ ಕೊರಿಯಾSeoulಸಿಯೋಲ್ಕಿಮ್ ಜಾಂಗ್ ಉನ್Historic Talksಐತಿಹಾಸಿಕ ಮಾತುಕತೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


