ಲಂಡನ್: ಬಸವೇಶ್ವರ ಪುತ್ಥಳಿಗೆ ಪ್ರಧಾನಿ ಮೋದಿ ಪುಷ್ಪ ನಮನ
ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬಸವ ಜಯಂತಿ ಪ್ರಯುಕ್ತ ಲಂಡನ್ ....

Published On :
ಲಂಡನ್: ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬಸವ ಜಯಂತಿ ಪ್ರಯುಕ್ತ ಲಂಡನ್ ನಲ್ಲಿರುವ ವಿಶ್ವಗುರು ಬಸವೇಶ್ವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಇಂದು ಪ್ರಧಾನಿ ಮೋದಿ ಬ್ರಿಟನ್ ಸಂಸತ್ ಭವನದ ಎದುರುಗಡೆ ಥೇಮ್ಸ್ ನದಿ ದಂಡೆಯಲ್ಲಿ ಸ್ಥಾಪಿತವಾಗಿರುವ ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಲಂಡನ್ ಬಸವೇಶ್ವರ ಪ್ರತಿಷ್ಠಾನ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸದರು.
ಇದಕ್ಕು ಮುನ್ನ ಕನ್ನಡದಲ್ಲೇ ಬಸವ ಜಯಂತಿ ಶುಭಾಶಯ ಕೋರಿ ಟ್ವೀಟ್ ಮಾಡಿದ್ದ ಮೋದಿ, ಭಗವಾನ್ ಬಸವೇಶ್ವರರಿಗೆ ಅವರ ಜಯಂತಿಯಂದು ನಾನು ತಲೆ ಬಾಗುತ್ತೇನೆ. ನಮ್ಮ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಅವರು ಕೇಂದ್ರ ಸ್ಥಾನ ಅಲಂಕರಿಸುತ್ತಾರೆ. ಸಾಮಾಜಿಕ ಸೌಹಾರ್ದ, ಸಹೋದರತ್ವ, ಏಕತೆ ಹಾಗೂ ಸಹಾನುಭೂತಿಗೆ ಅವರು ನೀಡಿದ ಪ್ರಾಮುಖ್ಯತೆ ನಮಗೆ ಸದಾ ಪ್ರೇರಣೆ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


