ವಿದೇಶ

ಬ್ರಿಟನ್ ಹೌಸ್ ಆಫ್ ಲಾರ್ಡ್ಸ್‌ ನಲ್ಲಿ ಕಥುವಾ ಅತ್ಯಾಚಾರ ಪ್ರಕರಣದ ಪ್ರಸ್ತಾಪ!

ಕುಥುವಾ ಅತ್ಯಾಚಾರ ಪ್ರಕರಣವನ್ನು ಮುಂದಿಟ್ಟುಕೊಂಡು ವಿಶ್ವ ಸಮುದಾಯದ ಎದುರು ಭಾರತಕ್ಕೆ ಮುಜುಗರವನ್ನುಂಟು ಮಾಡಲು ಪಾಕಿಸ್ಕಾನ ಪ್ರಯತ್ನಿಸಿದ್ದು, ಬ್ರಿಟನ್ ಹೌಸ್ ಆಫ್ ಲಾರ್ಡ್ಸ್‌ ನಲ್ಲಿ ಕಥುವಾ ಅತ್ಯಾಚಾರ ಪ್ರಕರಣದ ಪ್ರಸ್ತಾಪ ಮಾಡಿದೆ.

ಬ್ರಿಟನ್ ಹೌಸ್ ಆಫ್ ಲಾರ್ಡ್ಸ್‌ ನಲ್ಲಿ ಕಥುವಾ ಅತ್ಯಾಚಾರ ಪ್ರಕರಣದ ಪ್ರಸ್ತಾಪ!
ಸಂಗ್ರಹ ಚಿತ್ರ
Published On :
ಲಂಡನ್: ಕುಥುವಾ ಅತ್ಯಾಚಾರ ಪ್ರಕರಣವನ್ನು ಮುಂದಿಟ್ಟುಕೊಂಡು ವಿಶ್ವ ಸಮುದಾಯದ ಎದುರು ಭಾರತಕ್ಕೆ ಮುಜುಗರವನ್ನುಂಟು ಮಾಡಲು ಪಾಕಿಸ್ಕಾನ ಪ್ರಯತ್ನಿಸಿದ್ದು, ಬ್ರಿಟನ್ ಹೌಸ್ ಆಫ್ ಲಾರ್ಡ್ಸ್‌ ನಲ್ಲಿ ಕಥುವಾ ಅತ್ಯಾಚಾರ ಪ್ರಕರಣದ ಪ್ರಸ್ತಾಪ ಮಾಡಿದೆ.
 ಜಮ್ಮು ಮತ್ತು ಕಾಶ್ಮೀರದ ಕಥುವ ಜಿಲ್ಲೆಯಲ್ಲಿ 8 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯನ್ನು ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಪಾಕಿಸ್ತಾನದ ಸಂಸದರೊಬ್ಬರು ಪ್ರಸ್ತಾಪಿಸಿದ್ದು, ಬಾಲಕಿ ಅತ್ಯಾಚಾರ ಮತ್ತು ಹತ್ಯೆ ನಡೆಸಿದವರಿಗೆ ಶಿಕ್ಷೆಯಾಗುವಂತೆ ಬ್ರಿಟನ್ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. 
ಬ್ರಿಟನ್ ಸಂಸತ್ ಮೇಲ್ಮನೆಯಲ್ಲಿ ಪಾಕಿಸ್ತಾನ ಮೂಲದ ಜನಪ್ರತಿನಿಧಿ ಲಾರ್ಡ್ ಅಹ್ಮದ್ ಎಂಬುವವರು ಈ ವಿಚಾರ ಪ್ರಸ್ತಾಪ ಮಾಡಿದ್ದು, ಪ್ರಕರಣ ಸಂಬಂಧ ಬ್ರಿಟನ್ ಸರ್ಕಾರ ಮಧ್ಯೆ ಪ್ರವೇಶಿಸಬೇಕು ಎಂದು ಮನವಿ ಮಾಡಿದ್ದಾರೆ.  ಆದರೆ ಲಾರ್ಡ್ ಅಹ್ಮದ್ ಅವರ ಈ ಬೇಡಿಕೆಗೆ ಬ್ರಿಟನ್ ಸಂಸತ್ ಸಾರಸಗಟಾಗಿ ತಿರಸ್ಕರಿಸಿದ್ದು, ಭಾರತ ಪ್ರಬಲ ಪ್ರಜಾಸತ್ತಾತ್ಮಕ ಚೌಕಟ್ಟನ್ನು ಹೊಂದಿದ್ದು, ಮಾನವಹಕ್ಕುಗಳನ್ನು ಖಾತರಿಪಡಿಸಲಿದೆ ಎಂದು ಹೇಳಿದೆ.
ಈ ಬಗ್ಗೆ ಬ್ರಿಟಿಷ್ ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ ಬ್ಯಾರನೆಸ್ ಸ್ಟೆಡ್‌ಮನ್ ಸ್ಕಾಟ್ ಅವರು, ಕಥುವಾ ಅತ್ಯಾಚಾರ ಪ್ರಕರಣ ಸಂಬಂಧ ಮಧ್ಯ ಪ್ರವೇಶ ಮಾಡುವ ಪ್ರಸ್ತಾಪ ಬ್ರಿಟೀಷ್ ಸರ್ಕಾರದ ಮುಂದಿಲ್ಲ. ಅದರಲ್ಲೂ ಭಾರತ ಪ್ರಬಲ ಪ್ರಜಾಸತ್ತಾತ್ಮಕ ಚೌಕಟ್ಟನ್ನು ಹೊಂದಿದ್ದು, ಮಾನವಹಕ್ಕುಗಳನ್ನು ಖಾತರಿಪಡಿಸಲಿದೆ.  ಆದರೆ, ಭಾರತ ತನ್ನ ಸಂವಿಧಾನದಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ ಎನ್ನುವುದನ್ನು ನಾವು ಒಪ್ಪುತ್ತೇವೆ’’ ಎಂದರು.
ಅಂತೆಯೇ, ಈ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಭಯಾನಕವಾಗಿವೆ ಹಾಗೂ ಸಂತ್ರಸ್ತೆಯರ ಕುಟುಂಬಗಳಿಗೆ ಸಂತಾಪ ಸಲ್ಲಿಸುತ್ತೇವೆ. ಸಂತ್ರಸ್ತೆಯರಿಗೆ ನ್ಯಾಯ ಸಿಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಸ್ಟೆಡ್‌ಮನ್ ಸ್ಕಾಟ್ ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.