ವಾಟ್ಸ್ ಆಪ್ ಗೆ 'ಗುಡ್ ಬೈ' ಹೇಳಿದ ಸಹ ಸಂಸ್ಥಾಪಕ ಬ್ರಿಯಾನ್ ಆಕ್ಟನ್
ಫೇಸ್ ಬುಕ್ ಇಂಕ್ ಮಾಲೀಕತ್ವದ ವಾಟ್ಸ್ ಆಪ್ ನ ಸಹ-ಸಂಸ್ಥಾಪಕ ಬ್ರಿಯಾನ್ ಆಕ್ಟನ್, ವಾಟ್ಸ್ ಆಪ್ ನ್ನು ತೊರೆದಿದ್ದಾರೆ.
Published On :
ಅಮೆರಿಕಾ: ಫೇಸ್ ಬುಕ್ ಇಂಕ್ ಮಾಲೀಕತ್ವದ ವಾಟ್ಸ್ ಆಪ್ ನ ಸಹ-ಸಂಸ್ಥಾಪಕ ಬ್ರಿಯಾನ್ ಆಕ್ಟನ್, ವಾಟ್ಸ್ ಆಪ್ ನ್ನು ತೊರೆದಿದ್ದಾರೆ. ತಾವು ನೂತನ ಸಂಸ್ಥೆಯನ್ನು ಪ್ರಾರಂಭಿಸುವುದಕ್ಕಾಗಿ ಈ ಸಂಸ್ಥೆಯಿಂದ ಹೊರನಡೆಯುತ್ತಿದ್ದೇನೆ ಎಂದು ಆಕ್ಟನ್ ತನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಆಕ್ಟನ್ ಎಂಟು ವರ್ಷಗಳ ಕಾಲ ವಾಟ್ಸ್ ಆಪ್ ಸೇವೆಯಲ್ಲಿದ್ದರು, ಫೇಸ್ ಬುಕ್ 2014 ರಲ್ಲಿ 19 ಶತಕೋಟಿ ಡಾಲರ್ ನಗದು ಮತ್ತು ಸ್ಟಾಕ್ ಗಳ ಮೂಲಕ ವಾಟ್ಸ್ ಆಪ್ ನ್ನು ಖರೀದಿಸಿತ್ತು.
ಸ್ಟಾನ್ ಫೋರ್ಡ್ ನ ಹಳೆಯ ವಿದ್ಯಾರ್ಥಿಯಾಗಿದ್ದ ಆಕ್ಟನ್, 2009 ರಲ್ಲಿ ಉಕ್ರೇನ್ ವಲಸೆಗಾರ ಜಾನ್ ಕೌಮ್ ಅವರೊಡನೆ ವಾಟ್ಸ್ ಆಪ್ ಅನ್ನು ಪ್ರಾರಂಭಿಸಿದರು. ಹೀಗೆ ವಾಟ್ಸ್ ಆಪ್ ಅನ್ನು ಪ್ರಾರಂಭಿಸುವ ಮೊದಲು ಈ ಜೋಡಿಯು ಯಾಹೂದಲ್ಲಿ ಕೆಲಸ ಮಾಡುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Whatsappವಾಟ್ಸ್ ಆಪ್Brian Actonco-founder of WhatsAppFacebook Incಬ್ರಿಯಾನ್ ಆಕ್ಟನ್ಫೇಸ್ ಬುಕ್ ಇಂಕ್ವಾಟ್ಸ್ ಆಪ್ ಸಹ-ಸಂಸ್ಥಾಪಕ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

