ವಿದೇಶ

ಸ್ಪೆನ್ ನಿಂದ ಸ್ವಾತಂತ್ರ್ಯ ಘೋಷಿಸಿಕೊಂಡ ಕ್ಯಟಲೋನಿಯಾ

ಕ್ಯಟಲೋನಿಯಾದ ಸಂಸತ್ತು ಸ್ಪೇನ್ ನಿಂದ ಸ್ವಾಯತ್ತತೆ ಘೋಷಿಸಿಕೊಂಡಿದೆ.

ಸ್ಪೆನ್ ನಿಂದ ಸ್ವಾತಂತ್ರ್ಯ ಘೋಷಿಸಿಕೊಂಡ ಕ್ಯಟಲೋನಿಯಾ
ಕ್ಯಟಲೋನಿಯ
Published On :
ಬಾರ್ಸಿಲೋನಾ: ಕ್ಯಟಲೋನಿಯಾದ ಸಂಸತ್ತು ಸ್ಪೇನ್ ನಿಂದ ಸ್ವಾಯತ್ತತೆ ಘೋಷಿಸಿಕೊಂಡಿದೆ. 
ಅರೆ ಸ್ವಾಯತ್ತ ಪ್ರದೇಶವಾಗಿರುವ ಕ್ಯಟಲೋನಿಯಾದ ಮೇಲೆ ಸ್ಪೇನ್ ನೇರ ಆಡಳಿತ ಹೇರುವುದಕ್ಕೆ ಸಿದ್ಧತೆ ನಡೆಸಿತ್ತು, ಇದನ್ನು ತಡೆಯುವುದಕ್ಕಾಗಿ ಕಟಲೋನಿಯಾ ಸ್ಪೇನ್ ನಿಂದ ಸ್ವಾಯತ್ತತೆ ಘೋಷಿಸಿಕೊಂಡಿದೆ. ಸ್ವಾತಂತ್ರ್ಯದ ನಿರ್ಣಯದ ಪರವಾಗಿ 70 ಮತಗಳು ಚಲಾವಣೆಯಾಗಿದ್ದು, 10 ಮತಗಳು ವಿರುದ್ಧವಾಗಿದ್ದರೆ ಇನ್ನೆರಡು ಮತಗಳು ತಿರಸ್ಕೃತಗೊಂಡಿವೆ. 
135 ಸಂಸತ್ ಸದಸ್ಯರ ಬಲವಿರುವ ಸಂಸತ್ ನಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಕ್ಯಟಲೋನಿಯಾದ ವಿಪಕ್ಷ ಸಂಸದರು ಸಭಾತ್ಯಾಗ ಮಾಡಿದ್ದಾರೆ. ಕ್ಯಟಲೋನಿಯಾದ ನಡೆಯ ಬಗ್ಗೆ ಸ್ಪೇನ್ ಪ್ರಧಾನಿ ಮೇರಿಯಾನೊ ರಾಜಾಯ್ ಪ್ರತಿಕ್ರಿಯೆ ನೀಡಿದ್ದು, ಕಾನೂನನ್ನು ಮರುಸ್ಥಾಪನೆ ಮಾಡಲಾಗುವುದು, ಎಲ್ಲರೂ ಶಾಂತಿಯಿಂದ ಇರಬೇಕೆಂದು ಕರೆ ನೀಡಿದ್ದಾರೆ. 
ಸ್ಪೇನ್ ಹಾಗೂ ಕ್ಯಟಲೋನಿಯಾದ ನಡೆಯಿಂದ ಸ್ಪೇನ್ ನಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.