ಐಎಸ್ಐ ಗೆ ಉಗ್ರರ ನಂಟು ಇರುವುದನ್ನು ಒಪ್ಪಿಕೊಂಡ ಪಾಕ್ ಸೇನೆ, ಆದರೆ...
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಉಗ್ರರೊಂದಿಗೆ ನಂಟು ಹೊಂದಿದೆ ಎಂದು ಪಾಕಿಸ್ತಾನ ಸೇನೆ ಒಪ್ಪಿಕೊಂಡಿದೆ. ಆದರೆ ಉಗ್ರರೊಂದಿಗಿನ ನಂಟು ಸಕಾರಾತ್ಮಕವಾಗಿದ್ದು, ಉಗ್ರರನ್ನು ಬೆಂಬಲಿಸುತ್ತಿಲ್ಲ...

Published On :
ಇಸ್ಲಾಮಾಬಾದ್: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಉಗ್ರರೊಂದಿಗೆ ನಂಟು ಹೊಂದಿದೆ ಎಂದು ಪಾಕಿಸ್ತಾನ ಸೇನೆ ಒಪ್ಪಿಕೊಂಡಿದೆ. ಆದರೆ ಉಗ್ರರೊಂದಿಗಿನ ನಂಟು ಸಕಾರಾತ್ಮಕವಾಗಿದ್ದು, ಉಗ್ರರನ್ನು ಬೆಂಬಲಿಸುತ್ತಿಲ್ಲ ಎಂದು ಸಮರ್ಥನೆ ನೀಡಿದೆ.
ಒಂದೆರಡು ದಿನಗಳ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಬಗ್ಗೆ ಮಾತನಾಡಿದ್ದ ಅಮೆರಿಕದ ಜನರಲ್ ಜೋಸೆಫ್ ಡನ್ಫೋರ್ಡ್, " "ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಭಯೋತ್ಪಾದನೆಯೊಂದಿಗೆ ನಂಟು ಹೊಂದಿರುವುದು ನನ್ನ ಪ್ರಕಾರ ಸ್ಪಷ್ಟವಾಗಿದೆ ಎಂದು ವಿದೇಶಾಂಗ ಸಮಿತಿಗೆ ಹೇಳಿದ್ದರು" ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಮೇಜರ್ ಜನರಲ್ ಆಸೀಫ್ ಘಫೂರ್, ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ಉಗ್ರರೊಂದಿಗೆ ನಂಟು ಇರುವುದು ಹೌದು, ಆದರೆ ಅದು ನಕಾರಾತ್ಮಕವಲ್ಲ ಸಕಾರಾತ್ಮಕವಾದುದ್ದು, ನಂಟು ಹೊಂದಿರುವ ಮಾತ್ರಕ್ಕೆ ನಾವು ಉಗ್ರರಿಗೆ ಬೆಂಬಲ ನೀಡುತ್ತಿದ್ದೇವೆ ಎಂದಲ್ಲ ಸಮರ್ಥನೆ ನೀಡಿದ್ದಾರೆ.
ಅಮೆರಿಕದ ಜನರಲ್ ಸಹ ತಮ್ಮ ಹೇಳಿಕೆಯಲ್ಲಿ ಎಲ್ಲಿಯೂ ಪಾಕಿಸ್ತಾನದ ಗುಪ್ತಚರ ಇಲಾಖೆ ಉಗ್ರರನ್ನು ಬೆಂಬಲಿಸುತ್ತಿದೆ ಎಂದು ಹೇಳಿಲ್ಲ, ಬದಲಾಗಿ ಕೇವಲ ನಂಟು ಹೊಂದಿದೆ ಎಂದು ಹೇಳಿದ್ದಾರಷ್ಟೆ. ನಂಟು ಹೊಂದುವುದಕ್ಕೂ, ಬೆಂಬಲ ನೀಡುವುದಕ್ಕೂ ವ್ಯತ್ಯಾಸವಿದೆ. ಉಗ್ರಾರೊಂದಿಗೆ ನಂಟಿರದ ಯಾವುದಾದರೂ ಒಂದು ಗುಪ್ತಚರ ಸಂಘಟನೆಯನ್ನು ತೋರಿಸಿ ಎಂದು ಜನರಲ್ ಆಸೀಫ್ ಘಫೂರ್ ಹೇಳಿದ್ದಾರೆ.
ಇದೇ ವೇಳೆ ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಸಂಘಟನೆಯಾದ ಉಗ್ರ ಹಫೀಜ್ ಸಯೀದ್ ನ ಉಗ್ರ ಸಂಘಟನೆಯ ರಾಜಕೀಯ ಪಕ್ಷವಾಗಿರುವ ಮಿಲ್ಲಿ ಮುಸ್ಲಿಂ ಲೀಗ್ ಪಾಕ್ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನೂ ಸಹ ಜನರಲ್ ಆಸೀಫ್ ಘಫೂರ್ ಸಮರ್ಥಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


