ಸದ್ದಿಲ್ಲದೇ ವಿಶ್ವದ 'ಸೂಪರ್ ಪವರ್ ದೇಶ'ವಾಗುತ್ತಿರುವ ಚೀನಾ: ಅಮೆರಿಕ ತಜ್ಞರು
ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನೇತೃತ್ವದಲ್ಲಿ ಚೀನಾ ದೇಶ ಸದ್ದಿಲ್ಲದೇ ವಿಶ್ವದ ಸೂಪರ್ ಪವರ್ ದೇಶವಾಗಿ ಹೊರಹೊಮ್ಮುತ್ತಿದೆ ಅಮೆರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Published On :
ವಾಷಿಂಗ್ಟನ್: ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನೇತೃತ್ವದಲ್ಲಿ ಚೀನಾ ದೇಶ ಸದ್ದಿಲ್ಲದೇ ವಿಶ್ವದ ಸೂಪರ್ ಪವರ್ ದೇಶವಾಗಿ ಹೊರಹೊಮ್ಮುತ್ತಿದೆ ಅಮೆರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಅಮೆರಿಕದ ವಾಷಿಂಗ್ಟನ್ ಪೋಸ್ಟ್ ನಲ್ಲಿ ಖ್ಯಾತ ಅಂಕಣಕಾರ ಡೇವಿಡ್ ಇಗ್ನೇಷಿಯಸ್ ಅವರು ಬರೆದಿದ್ದು, ಚೀನಾದ ಬಹು ಉದ್ದೇಶಿತ ಪ್ರಮುಖಮಹತ್ವಾಕಾಂಕ್ಷೆಯ ಒನ್ ಬೆಲ್ಟ್ ಒನ್ ರೋಡ್ ಯೋಜನೆಯ ಚಾಲನೆ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಅವರ ಭೇಟಿ ಚೀನಾ ವಿಶ್ವದ ಸೂಪರ್ ಪವರ್ ದೇಶವಾಗಿ ಪರಿವರ್ತನೆಯಾಗುತ್ತಿರುವ ಲಕ್ಷಣ ಎಂದು ಹೇಳಿದ್ದಾರೆ.
ಅಂತೆಯೇ ಬೀಜಿಂಗ್ ತಾಳ್ಮೆಯಿಂದ ವಿಶ್ವ ಸಮುದಾಯದೊಂದಿಗೆ ವ್ಯವಹರಿಸುವ ಮೂಲಕ ತನ್ನ ಗುರಿಯತ್ತ ಯಾವುದೇ ಅಡೆತಡೆಗಳಿಲ್ಲದೇ ಸಾಗುತ್ತಿದೆ. ಚೀನಾದ ಈ ಪ್ರಗತಿ ವಿಶ್ವದ ಯಾವುದೇ ರಾಷ್ಟ್ರವನ್ನೂ ತನ್ನ ಪ್ರಭಾವಕ್ಕೊಳಪಡಿಸಿಕೊಳ್ಳುತ್ತದೆ. ಚೀನಾ ದೇಶದ ಹೊಸ ದೃಷ್ಟಿಕೋನ ಮತ್ತು ಚೀನಾದ ಅಂತಾರಾಷ್ಟ್ರೀಯ ಯೋಜನೆಗಳು ವಿಶ್ವದ ಸೂಪರ್ ಪವರ್ ಆಗಿ ರೂಪುಗೊಳ್ಳುವತ್ತ ಸಾಗಿದೆ. ಈಗಾಗಲೇ ಚೀನಾ ಬಹುತೇಕ ತನ್ನ ಗುರಿ ಸಾಧಿಸಿದ್ದು, ಒಬೋರ್ ಸೇರಿದಂತೆ ಚೀನಾಗೆ ಜಾಗತಿಕ ಸಂಸ್ಥೆಗಳ ಹೊಸ ಸಂಪರ್ಕ ಜಾಲಗಳ ಅವಶ್ಯಕತೆ ಇದೆಯಷ್ಟೇ.. ಎಂದು ಅವರು ಹೇಳಿದ್ದಾರೆ.
ಅಂತೆಯೇ ಹಾಲಿ ಸೂಪರ್ ಪವರ್ ರಾಷ್ಟ್ರವಾಗಿರುವ ಅಮೆರಿಕ ನೇತೃತ್ವದ ಆದೇಶಗಳನ್ನು ಚೀನಾ ಹೇಗೆ ನಿಯಂತ್ರಿಸಲಿದೆ ಎಂಬುದರ ಮೇಲೆ ಆ ದೇಶದ ಸಾಮರ್ಥ್ಯ ಅಡಗಿದೆ ಎಂದು ಡೇವಿಡ್ ಇಗ್ನೇಷಿಯಸ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


