ಅಮ್ಮನಿಗೆ "ಐ ಲವ್ ಯೂ" ಎಂದ 3 ತಿಂಗಳ ಕಂದ: ವಿಡಿಯೋ ವೈರಲ್
3 ತಿಂಗಳ ಹಾಲುಕಂದಮ್ಮ ತನ್ನ ಅಮ್ಮನಿಗೆ ಐ ಲವ್ ಯೂ ಹೇಳಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕವಾಗಿ ಶೇರ್ ಆಗುತ್ತಿದೆ.

ಗ್ಲಾಸ್ಗೋವ್: 3 ತಿಂಗಳ ಹಾಲುಕಂದಮ್ಮ ತನ್ನ ಅಮ್ಮನಿಗೆ ಐ ಲವ್ ಯೂ ಹೇಳಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕವಾಗಿ ಶೇರ್ ಆಗುತ್ತಿದೆ.
ಸ್ಕಾಟ್ ಲ್ಯಾಂಡ್ ನ ಗ್ಲಾಸ್ಗೋವ್ ನಗರದ ನಿವಾಸಿಗಳಾದ ಕ್ಲೇರ್ ರೀಡ್ (28 ವರ್ಷ )ಮತ್ತು ಗ್ರಾಂಟ್ ರೀಡ್ (32 ವರ್ಷ) ದಂಪತಿಯ 13 ವಾರಗಳ ಹೆಣ್ಮು ಮಗು ತನ್ನ ತಾಯಿ ಐ ಲವ್ ಯೂ ಹೇಳಿದಾಗ ತಾನು ಕೂಡ ಐ ಲವ್ ಯೂ ಎಂದು ಹೇಳಿದ್ದಾಳೆ. ಈ ವಿಡಿಯೋವನ್ನು ಸಂಬಂಧಿಕರೊಬ್ಬರು ಚಿತ್ರೀಕರಿಸಿದ್ದು, ಕೂಡಲೇ ತಾಯಿ ಕ್ಲೇರ್ ರೀಡ್ ಗೆ ಫೋನಾಯಿಸಿ ವಿಚಾರ ತಿಳಿಸಿದ್ದಾಳೆ. ಆದರೆ ಪತಿ ಗ್ರಾಂಟ್ ರೀಡ್ ಮೊದಲು ಅದನ್ನು ನಂಬಲಿಲ್ಲ. ಬಳಿಕ ಕ್ಲೇರ್ ಅದನ್ನು ವಾಟ್ಸಪ್ ಮೂಲಕ ತನ್ನ ಪತಿಗೆ ಕಳುಹಿಸಿದ್ದಾಳೆ.
ಈ ವಿಡಿಯೋ ನೋಡಿದ ಗ್ರಾಂಟ್ ನಿಜಕ್ಕೂ ಅಚ್ಚರಿಗೆ ಒಳಗಾಗಿದ್ದು, ತನ್ನ ಪುಟ್ಟ ಮಗಳು ತನ್ನ ತಾಯಿಗೆ ಐ ಲವ್ ಯೂ ಹೇಳಿರುವುದನ್ನು ನೋಡಿ ಅಶ್ಚರ್ಯಗೊಂಡಿದ್ದಾನೆ. ವೃತ್ತಿಪರವಾಗಿ ಗ್ರಾಂಟ್ ಎಂಜಿನಿಯರ್ ಆಗಿದ್ದು, ಪ್ರಸ್ತುತ ದಂಪತಿಗಳಉ ಗ್ಲಾಸ್ಗೋವ್ ನಗರದ ಹೊಟೆಲ್ ವೊಂದರಲ್ಲಿ ತಂಗಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಶೇರ್ ಆಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


