ವಿದೇಶ

ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಗೆ ತೆರೆ: ಎಮ್ಯಾನುಯಲ್​ ಮ್ಯಾಕ್ರನ್​ಗೆ ಭರ್ಜರಿ ಜಯ

ಫ್ರಾನ್ಸ್​ ಅಧ್ಯಕ್ಷೀಯ ಚುನಾವಣೆಗೆ ತೆರೆ ಬಿದ್ದಿದ್ದು, ಮೇಲಿನ್​ ವಿರುದ್ಧ ಎಮ್ಯಾನುಯಲ್​ ಮ್ಯಾಕ್ರನ್​ಗೆ ಭರ್ಜರಿ ಜಯ ಗಳಿಸಿ ಅತ್ಯಂತ ಕಿರಿಯ ಅಧ್ಯಕ್ಷ ಎಂಬ ...

ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಗೆ ತೆರೆ: ಎಮ್ಯಾನುಯಲ್​ ಮ್ಯಾಕ್ರನ್​ಗೆ ಭರ್ಜರಿ ಜಯ
ಎಮ್ಯಾನುಯಲ್​ ಮ್ಯಾಕ್ರನ್
Published On :
ಪ್ಯಾರಿಸ್; ಫ್ರಾನ್ಸ್​ ಅಧ್ಯಕ್ಷೀಯ ಚುನಾವಣೆಗೆ ತೆರೆ ಬಿದ್ದಿದ್ದು, ಮೇಲಿನ್​ ವಿರುದ್ಧ ಎಮ್ಯಾನುಯಲ್​ ಮ್ಯಾಕ್ರನ್​ಗೆ ಭರ್ಜರಿ ಜಯ ಗಳಿಸಿ ಅತ್ಯಂತ ಕಿರಿಯ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 
ಯೂರೋಪಿಯನ್ ಒಕ್ಕೂಟದ ಪರ ಒಲವು ಹೊಂದಿರುವ 39 ಇಮ್ಯಾನುಯಲ್ ಮ್ಯಾಕ್ರನ್ ಫ್ರಾನ್ಸ್​ನ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.
ಇಮ್ಯಾನುಯಲ್ ತಮ್ಮ ಪ್ರತಿಸ್ಪರ್ಧಿ ಬಲಪಂಥೀಯ ಪಕ್ಷ ನ್ಯಾಷನಲ್ ಫ್ರಂಟ್​ನ ಮರೀನ್ ಲೇ ಪೆನ್ ಅವರನ್ನು ಸೋಲಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಗೆಲುವು ಖಚಿತವಾಗುತ್ತಿದ್ದಂತೆ ರಾಷ್ಟ್ರವನ್ನುದ್ದೇಶಿಸಿ ಮಾರ್ಕನ್ ಮಾತನಾಡಿದ್ದು, ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿದೆ. ದೇಶವನ್ನು ಹಲವಾರು ಸಮಸ್ಯೆಗಳು ಕಾಡುತ್ತಿವೆ. ಜನರ ಕಷ್ಟಗಳನ್ನು ಆಲಿಸುವುದು ನನ್ನ ಮೂಲ ಕರ್ತವ್ಯ, ನನ್ನ ಸಾಮರ್ಥ್ಯವನ್ನೆಲ್ಲಾ ಬಳಸಿ ಸಮಸ್ಯೆಗಳ ವಿರುದ್ಧ ಹೋರಾಡುತ್ತೇನೆ ಎಂದು ಹೇಳಿದ್ದಾರೆ. 
ಎಮ್ಯಾನುಯಲ್  ಶೇ 65.1 ಮತ್ತು ಮೆಲೀನ್‌ ಲೇ ಪೆನ್‌  ಶೇ 34.9ರಷ್ಟು ಮತ ಗಳಿಸಿದ್ದಾರೆ. ಎಮ್ಯಾನುಯಲ್ ನಿರೀಕ್ಷೆಗಿಂತ ಅಧಿಕ ಮತ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.